alex Certify
ಕನ್ನಡ ದುನಿಯಾ       Mobile App
       

Kannada Duniya

ಆಸೆ ಈಡೇರಿಸಿಕೊಳ್ಳುವಾಗಲೇ ಬಂದೆರಗಿದ ಸಾವು

tyland

ಕೆಲವರಿಗೆ ಏನೇನೋ ಆಸೆ ಆಕಾಂಕ್ಷೆಗಳಿರುತ್ತವೆ. ಹೀಗೆ ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಹೋದ ವ್ಯಕ್ತಿಯೊಬ್ಬರು ದುರಂತವಾಗಿ ಸಾವು ಕಂಡಿದ್ದಾರೆ.

ಆಸ್ಟ್ರೇಲಿಯಾದ ರೋಗರ್ ಜಾನ್ ಅವರಿಗೆ 70 ವರ್ಷ ವಯಸ್ಸು. ಅವರಿಗೆ ಪ್ಯಾರಾಸೈಲಿಂಗ್ ಮಾಡಬೇಕೆಂಬ ಮಹದಾಸೆಯಿತ್ತು.

ಅದರಂತೆ ಥೈಲ್ಯಾಂಡ್ ನ ಪುಕೆಟ್ ನಲ್ಲಿರುವ ಕಾಟಾ ಬೀಚ್ ಗೆ ಪತ್ನಿಯೊಂದಿಗೆ ಆಗಮಿಸಿದ್ದಾರೆ. ಪ್ಯಾರಾಸೈಲಿಂಗ್ ನಲ್ಲಿ ಆಕಾಶದೆತ್ತರಕ್ಕೆ ಹಾರಿದ್ದಾರೆ.

ಅವರ ಹಾರಾಟದ ದೃಶ್ಯಗಳನ್ನು ಪತ್ನಿ ಸೆರೆ ಹಿಡಿದಿದ್ದಾರೆ. ಆದರೆ, ಅಜ್ಜನ ಅದೃಷ್ಟ ಸರಿ ಇರಲಿಲ್ಲ ಎನಿಸುತ್ತೆ. ಪ್ಯಾರಾಸೈಲಿಂಗ್ ನಲ್ಲಿ ಹಾರಿದ ಕೆಲವೇ ಕ್ಷಣದಲ್ಲಿ ಸಮುದ್ರಕ್ಕೆ ಬಿದ್ದಿದ್ದಾರೆ.

ಹಿಡಿತ ಕಳೆದುಕೊಂಡು ಜಾನ್ ಕೆಳಗೆ ಬೀಳುತ್ತಿರುವ ದೃಶ್ಯ ವೈರಲ್ ಆಗಿದೆ. ಅವರನ್ನು ಕೂಡಲೇ ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಈ ವೇಳೆಗಾಗಲೇ ಅವರು ಮೃತಪಟ್ಟಿದ್ದರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...