alex Certify
ಕನ್ನಡ ದುನಿಯಾ       Mobile App
       

Kannada Duniya

ಅದಕ್ಕೂ ಒಂದು ಸಚಿವಾಲಯ ಸ್ಥಾಪನೆಯಾಯ್ತು !

happyness-happiness-and-stock-photos-213457

ಜನರ ಕಲ್ಯಾಣಕ್ಕಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ. ಅದರಲ್ಲಿಯೂ ದೇಶದ ಜನರು ಸದಾಕಾಲ ಖುಷಿಯಾಗಿರಬೇಕೆಂಬ ಉದ್ದೇಶದಿಂದ ಪ್ರತ್ಯೇಕ ಸಚಿವಾಲಯವನ್ನೇ ಆರಂಭಿಸುವುದೆಂದರೆ ಸಾಮಾನ್ಯ ಮಾತೇನಲ್ಲ.

ನಮ್ಮಲ್ಲಿ ಆರೋಗ್ಯ, ರಕ್ಷಣೆ, ಹಣಕಾಸು, ಶಿಕ್ಷಣ ಹೀಗೆ ಹಲವಾರು ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ ಜನರನ್ನು ಸದಾಕಾಲ ಖುಷಿಯಾಗಿಡಲು ಒಂದು ಪ್ರತ್ಯೇಕ ಸಚಿವಾಲಯ ಇದ್ದರೆ ಇನ್ನೂ ಚೆನ್ನಾಗಿರುತ್ತದೆ ಅಲ್ಲವೇ?. ಯುಎಇಯಲ್ಲಿ ದೇಶದ ಜನರು ಸಂತಸ, ಖುಷಿಯಿಂದ ಇರಲು ಹ್ಯಾಪಿನೆಸ್ ಮಿನಿಸ್ಟ್ರಿಯನ್ನು ಸ್ಥಾಪಿಸಲಾಗಿದೆ. ಜನ ಶಾಂತಿ, ಸಂತಸದಿಂದ ಇರಲು ಅನುಕೂಲಕರವಾದ ವಾತಾವರಣ ಕಲ್ಪಿಸುವ ಉದ್ದೇಶದಿಂದ ಇಂತಹ ಪ್ರಯತ್ನ ಆರಂಭಿಸಿದ್ದಾರೆ.

ಎಲ್ಲಾ ಜಾತಿ, ಧರ್ಮದವರ ನಡುವೆ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಸಹಿಷ್ಣುತಾ ಇಲಾಖೆಯನ್ನು ಕೂಡ ಆರಂಭಿಸಿದ್ದು, ಅದಕ್ಕೊಬ್ಬರು ಸಚಿವರನ್ನು ನೇಮಕ ಮಾಡಲಾಗಿದೆ. ಈ ಹಿಂದೆಯೇ ವೆನಿಜುವೆಲಾ, ಇಕ್ವೆಡಾರ್ ನಲ್ಲಿ ಹ್ಯಾಪಿನೆಸ್ ಸಚಿವಾಲಯ ಆರಂಭಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...