alex Certify
ಕನ್ನಡ ದುನಿಯಾ       Mobile App
       

Kannada Duniya

ಖುಷಿ ತಡೆಯಲಾಗದೆ ಡಾನ್ಸ್ ಮಾಡಿದೆ ಈ ಗೊರಿಲ್ಲಾ

gorilla-dancing_650x400_71498275070

ಅತ್ಯಂತ ಕುತೂಹಲ ಹುಟ್ಟಿಸುವ ಪ್ರಾಣಿಗಳಲ್ಲಿ ಗೊರಿಲ್ಲಾ ಕೂಡ ಒಂದು. ಅದರ ಹಾವಭಾವ ಸ್ವಲ್ಪ ಮನುಷ್ಯರನ್ನು ಹೋಲುವುದರಿಂದ ಅದನ್ನೆಲ್ಲಾ ನೋಡುವುದು ತಮಾಷೆಯಾಗಿರುತ್ತೆ. ಅಂಥದ್ರಲ್ಲಿ ಗೊರಿಲ್ಲಾ ಏನಾದ್ರೂ ಡಾನ್ಸ್ ಮಾಡಲು ಶುರು ಮಾಡಿಬಿಟ್ರೆ ಪ್ರವಾಸಿಗರ ಕಣ್ಣಿಗೆ ಹಬ್ಬವೇ ಸರಿ.

ಅಮೆರಿಕದ ಡಲ್ಲಾಸ್ ಮೃಗಾಲಯದಲ್ಲಿರೋ 14 ವರ್ಷದ ಗಂಡು ಗೊರಿಲ್ಲಾ ಜೋಲಾ ಕೂಡ ಸಖತ್ ಮಸ್ತಿ ಮೂಡ್ ನಲ್ಲಿತ್ತು. ಟಬ್ ನಲ್ಲಿ ಸ್ನಾನ ಮಾಡ್ತಾ ಸಖತ್ತಾಗಿ ಸ್ಟೆಪ್ ಹಾಕಿದೆ. ಗೊರಿಲ್ಲಾಕ್ಕೆ ಮ್ಯೂಸಿಕ್, ಹಾಡು, ಕೊರಿಯೋಗ್ರಫಿ ಯಾವುದೂ ಬೇಕಿರಲಿಲ್ಲ.

ನೀರಿನಲ್ಲಿ ಮಜವಾಗಿ ಆಟವಾಡ್ತಾ ಬ್ರೇಕ್ ಡಾನ್ಸ್ ಮಾಡಿದೆ. ಈ ವಿಡಿಯೋವನ್ನು ಜೂನ್ 20ರಂದು ಯುಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಇದುವರೆಗೆ 5 ಲಕ್ಷಕ್ಕೂ ಹೆಚ್ಚು ಜನರು ಗೊರಿಲ್ಲಾ ಡಾನ್ಸ್ ನೋಡಿದ್ದಾರೆ. 2011ರಲ್ಲೂ ಈ ಗೊರಿಲ್ಲಾ ಇದೇ ರೀತಿ ಡಾನ್ಸ್ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...