alex Certify
ಕನ್ನಡ ದುನಿಯಾ       Mobile App
       

Kannada Duniya

ಠಾಣೆಯಲ್ಲೇ ಮಾಡೆಲ್ ವಿವಸ್ತ್ರಗೊಳಿಸಿದ ಪೊಲೀಸರು

model

ಕೊಲಂಬಿಯಾದ ಪೊಲೀಸ್ ಠಾಣೆಯಲ್ಲಿ ರೂಪದರ್ಶಿಯೊಬ್ಬಳ ಮೇಲೆ ದೌರ್ಜನ್ಯ ನಡೆದಿದೆ. ಕ್ಯಾಥರೀನ್ ಮಾರ್ಟಿನೆಜ್ ಎಂಬಾಕೆಯನ್ನು ಕಿಟಕಿಗೆ ಕಟ್ಟಿ ಹಾಕಿದ ಪೊಲೀಸರು ಬಲವಂತವಾಗಿ ಬಟ್ಟೆ ಬಿಚ್ಚಿಸಿದ್ದಾರೆ. ಪುರುಷ ಖೈದಿಗಳ ಎದುರೇ ಆಕೆಯನ್ನು ವಿವಸ್ತ್ರಳಾಗಿ ನಿಲ್ಲಿಸಿ ಪೋಸ್ ಕೊಡುವಂತೆ ಸೂಚಿಸಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರೇ ಅದನ್ನು ಆನ್ ಲೈನ್ ನಲ್ಲಿ ಹರಿಬಿಟ್ಟಿದ್ದಾರೆ. ಇಷ್ಟೆಲ್ಲಾ ಮಾಡಿ ನಂತರ ತಮ್ಮ ಕೃತ್ಯದ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಖೈದಿಗಳು ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಕ್ಯಾಥರೀನ್ ಆರೋಪ ಮಾಡಿದ್ದಾಳೆ.

ಸದ್ಯ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲು ತಯಾರಿ ನಡೆಸಿರುವ ಮಾಡೆಲ್, ಘಟನೆ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಸಾಬೀತಾದಲ್ಲಿ ಅವರನ್ನು ಕರ್ತವ್ಯದಿಂದ ವಜಾ ಮಾಡಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...