alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಮತ್ತಿನಲ್ಲಿ ಹೀಗೆಲ್ಲ ಮಾಡಿದ್ರು ವಿದ್ಯಾರ್ಥಿಗಳು

ಪ್ರತಿ ವರ್ಷದಂತೆ ಈ ವರ್ಷ ಕೂಡ ವಿಶ್ವದ ಅನೇಕ ದೇಶಗಳಲ್ಲಿ ಹ್ಯಾಲೋವೀನ್ ಡೇ ಆಚರಿಸಲಾಯ್ತು. ಅಕ್ಟೋಬರ್ 31ರಂದು ಹ್ಯಾಲೋವೀನ್ ಡೇ ಆಚರಿಸಲಾಗುತ್ತದೆ. ಲಂಡನ್ ನಲ್ಲಿ ಕೂಡ ಮಕ್ಕಳಿಂದ ಹಿಡಿದು ಯುವಕರು, ವೃದ್ಧರವರೆಗೆ ಬಗೆ ಬಗೆಯ ವೇಷ ತೊಟ್ಟಿದ್ದರು. ಕೆಲವರು ಗುರುತು ಸಿಗದಂತೆ, ಭಯ ಹುಟ್ಟಿಸುವ ರೀತಿಯಲ್ಲಿ ಮೇಕಪ್ ಮಾಡಿಕೊಂಡಿದ್ದರು.

ಕೇವಲ ವೇಷ ಬದಲಾವಣೆ ಮಾಡಿದ್ದೊಂದೇ ಅಲ್ಲ ಮದ್ಯ ಮತ್ತು ಪಾರ್ಟಿ ಕೂಡ ಜೋರಾಗಿತ್ತು. ಲಂಡನ್ ನ ಪೋರ್ಟ್ಸ್ಮೌತ್ ವಿಶ್ವವಿದ್ಯಾನಿಲಯದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾತ್ರಿ ಪೂರ್ತಿ ಕುಡಿದು ಕುಣಿದ್ರು. ಬ್ರಿಟನ್ ನಲ್ಲಿ ಮಂಗಳವಾರ ರಾತ್ರಿ ತಾಪಮಾನ 10 ಡಿಗ್ರಿಗೆ ಇಳಿದಿತ್ತು. ಇಷ್ಟು ಚಳಿ ಮಧ್ಯೆಯೇ ವಿದ್ಯಾರ್ಥಿಗಳು ಹಬ್ಬ ಆಚರಿಸಿದ್ದು ವಿಶೇಷವಾಗಿತ್ತು.

ತಡ ರಾತ್ರಿಯಾದ್ರೂ ಪಬ್, ಬಾರ್ ಗಳು ಮುಚ್ಚಿರಲಿಲ್ಲ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಡಿದು ಕುಣಿಯುತ್ತಿದ್ದರೆ ಪೊಲೀಸರು ಸುಸ್ತಾಗಿದ್ದರು. ಮದ್ಯದ ನಶೆಯಲ್ಲಿ ವಿದ್ಯಾರ್ಥಿಗಳು ಮಾಡಿದ ಯಡವಟ್ಟು ಚಳಿಯಲ್ಲೂ ಪೊಲೀಸರು ಬೆವರಿಳಿಯುವಂತೆ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...