alex Certify
ಕನ್ನಡ ದುನಿಯಾ       Mobile App
       

Kannada Duniya

ಮೈ ಬಿಸಿಯಾಗಿಸುತ್ತೆ ಚೀನಾದ ಈ ಸ್ಪರ್ಧೆ

chilli-eating-contest-afp_650x400_51502712031

ಮೆಣಸು ಹಿತವಾಗಿ ಮಿತವಾಗಿ ತಿಂದ್ರೆ ಚಂದ. ಅತಿಯಾಗಿ ಖಾರ ತಿಂದ್ರೆ ಎಲ್ಲಾ ಕಡೆ ಬಿಸಿ ಶುರುವಾಗುತ್ತೆ, ಖಾರ ತಡೆಯಲಾಗದೆ ಬೊಬ್ಬೆ ಹಾಕಬೇಕಾಗುತ್ತೆ. ತಿನ್ನೋದ್ ಹಾಗಿರ್ಲಿ, ಚೀನಾದಲ್ಲಿ ನಡೆದ ಈ ಸ್ಪರ್ಧೆಯನ್ನೂ ನೋಡಿದ್ರೇನೆ ಮೈಯೆಲ್ಲಾ ಖಾರ ಹತ್ತಿ ಉರಿದಂತಾ ಭಾವನೆ ಮೂಡೋದು ಸಹಜ.

chilli-eating-contest_650x400_61502711978

ಅಷ್ಟಕ್ಕೂ ಇದೇನ್ ಸ್ಪರ್ಧೆ ಗೊತ್ತಾ? ಮೆಣಸಿನಕಾಯಿ ತಿನ್ನೋ ಕಾಂಪಿಟೇಶನ್. ದೊಡ್ಡದೊಂದು ಟಬ್ ತುಂಬಾ ಕೆಂಪಗಿನ ಮೆಣಸಿನಕಾಯಿ ತುಂಬಿಸಿ ಅದರಲ್ಲೇ ಸ್ಪರ್ಧಿಗಳನ್ನು ಕೂರಿಸಲಾಗುತ್ತದೆ. ಅವರು ಎಷ್ಟು ಬೇಕಾದ್ರೂ ಮೆಣಸನ್ನು ತಿನ್ನಬಹುದು.

chilli-eating-contest-afp_650x400_51502712031 chilli-eating-contest-afp_650x400_41502712009

ನಿಂಗ್ ಕ್ಸಿಯಾಂಗ್ ಎಂಬಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಹುನಾನ್ ಪ್ರದೇಶ ಸ್ಪೈಸಿ ತಿನಿಸುಗಳಿಗೆ ಹೆಸರುವಾಸಿ. ಹಾಗಾಗಿ ಪ್ರವಾಸಿಗರನ್ನು ಆಕರ್ಷಿಸಲೆಂದೇ ಈ ಸ್ಪರ್ಧೆ ನಡೆಸಲಾಗಿದೆ. ಈ ಸ್ಪರ್ಧೆಯಲ್ಲಿ ಸು ಎಂಬಾತ ಗೆಲುವು ಸಾಧಿಸಿದ್ದಾನೆ. ಆತ ಕೇವಲ 60 ಸೆಕೆಂಡ್ ಗಳಲ್ಲಿ 15 ಮೆಣಸಿನಕಾಯಿಗಳನ್ನು ತಿಂದಿದ್ದಾನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...