alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಚುನಾವಣೆಯಲ್ಲಿ 200 ಸ್ಪರ್ಧಿಗಳನ್ನು ಕಣಕ್ಕಿಳಿಸಲಿದ್ದಾನೆ ಹಫೀಜ್

26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಚುನಾವಣೆ ಎದುರಿಸಲು ಮುಂದಾಗಿದ್ದಾನೆ. ಹಫೀಜ್ ಸ್ವತಃ ಚುನಾವಣಾ ಕಣಕ್ಕಿಳಿಯುತ್ತಿಲ್ಲ. ತನ್ನ ಪಕ್ಷದಿಂದ 200 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಯೀದ್ ಮುಂದಾಗಿದ್ದಾನೆ.

ಪಾಕಿಸ್ತಾನದಲ್ಲಿ ಜುಲೈ 25ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ಹಫೀಜ್ ಸಿದ್ಧವಾಗ್ತಿದ್ದಾನೆ. ಲಷ್ಕರ್-ಇ-ತೋಯ್ಬಾ ಜೊತೆ ಸೇರಿರುವ ಜಮಾತ್-ಉದ್-ದಾವಾದ ರಾಜಕೀಯ ಪಕ್ಷದ ಹೆಸರು ಎಂಎಂಎಲ್. ಈವರೆಗೂ ಈ ಪಾರ್ಟಿ ಪಾಕಿಸ್ತಾನ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿಲ್ಲ. ಹಾಗಾಗಿ ಜಮತ್-ಉದ್-ದಾವಾ ನಿಷ್ಕ್ರಿಯ ರಾಜಕೀಯ ಪಕ್ಷ ಎಎಟಿ ಮೂಲಕ ಸ್ಪರ್ಧೆ ನಡೆಸಲು ಮುಂದಾಗಿದೆ.

ಜಮಾತ್-ಉದ್-ದಾವಾದ ಅಭ್ಯರ್ಥಿಗಳು ಚುನಾವಣಾ ಆಯೋಗದಿಂದ ನಾಮಪತ್ರ ತೆಗೆದುಕೊಂಡು ನಾಮಪತ್ರ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ. ಆದ್ರೆ ಎಂಎಂಎಲ್ ಗೆ ಇನ್ನೂ ಚುನಾವಣಾ ಆಯೋಗದಿಂದ ಒಪ್ಪಿಗೆ ಸಿಕ್ಕಿಲ್ಲ. 2008 ರಲ್ಲಿ ಮುಂಬೈ ದಾಳಿಗೆ ಕಾರಣವಾಗಿದ್ದ ಹಫೀಜ್ ಸಯೀದ್ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಗೆ ನೀಡಬಾರದೆಂಬ ಒತ್ತಡ ಕೇಳಿ ಬಂದಿದೆ. ಇದೇ ಕಾರಣಕ್ಕೆ ಚುನಾವಣಾ ಆಯೋಗ ಇನ್ನೂ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ. ಹಾಗಾಗಿ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ಪಕ್ಷದಿಂದ ಹಫೀಜ್ ಸದಸ್ಯರು ಚುನಾವಣಾ ಸ್ಪರ್ಧೆಗಿಳಿಯಲಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...