alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಗೂ ಮುನ್ನವೇ ತನ್ನ ವರಸೆ ತೋರಿದ ಹಫೀಜ್

ಪಾಕ್ ಜೈಲಿನಿಂದ ಬಿಡುಗಡೆಯಾಗುವ ಮೊದಲೇ 26/11ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ತನ್ನ ವರಸೆ ಶುರುಮಾಡಿದ್ದಾನೆ. ಸದ್ಯದಲ್ಲಿಯೇ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ಸಯೀದ್ ಹೇಳಿದ್ದಾನೆ. ಭಾರತ ಏನು ಮಾಡಲೂ ಸಾಧ್ಯವಿಲ್ಲವೆಂದು ಹಫೀಜ್ ಸವಾಲು ಹಾಕಿದ್ದಾನೆ.

ಬುಧವಾರ ಲಾಹೋರ್ ಕೋರ್ಟ್ ಹಫೀಜ್ ಸಯೀದ್ ನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಿದೆ. 10 ತಿಂಗಳ ಕಾಲ ಜೈಲಿನಲ್ಲಿದ್ದ ಹಫೀಜ್ ಸಾಕ್ಷ್ಯಾಧಾರದ ಕೊರತೆ ಕಾರಣ ಹೇಳಿ ಕೋರ್ಟ್ ಬಿಡುಗಡೆ ಮಾಡಿದೆ. ಗುರುವಾರ ಸಯೀದ್ ಜೈಲಿನಿಂದ ಹೊರಗೆ ಬರಲಿದ್ದಾನೆ.

ಹಫೀಜ್ ಸಯೀದ್ ತಲೆಗೆ ಅಮೆರಿಕಾ ಸರ್ಕಾರ 1 ಕೋಟಿ ಡಾಲರ್ ಬಹುಮಾನ ಘೋಷಿಸಿದೆ. ಪಂಜಾಬ್ ಸರ್ಕಾರ ಹಫೀಜ್ ಬಿಡುಗಡೆ ಮಾಡದಿರುವಂತೆ ಕೋರ್ಟ್ ಗೆ ಮನವಿ ಮಾಡಿತ್ತು. ಆದ್ರೆ ಲಾಹೋರ್ ಕೋರ್ಟ್ ಸಯೀದ್ ನನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ತೀರ್ಪು ಬರ್ತಿದ್ದಂತೆ ಮಾತನಾಡಿದ ಹಫೀಜ್ ಸಯೀದ್, ಭಾರತದ ಎಲ್ಲ ಪ್ರಯತ್ನದ ಹೊರತಾಗಿಯೂ ನನ್ನ ಬಿಡುಗಡೆಯಾಗಿದೆ. ಇದು ನನ್ನ ಗೆಲುವಲ್ಲ. ಇಡೀ ಪಾಕಿಸ್ತಾನದ ಪ್ರಕರಣವಾಗಿತ್ತು. ಪಾಕಿಸ್ತಾನವೊಂದು ಸ್ವತಂತ್ರ್ಯ ದೇಶ ಎಂಬುದು ಮತ್ತೆ ಸಾಬೀತಾಗಿದೆ. ಭಾರತ ನನಗೆ ಹಾಗೂ ಕಾಶ್ಮೀರಕ್ಕೆ ಯಾವುದೇ ಹಾನಿ ಮಾಡಲು ಸಾಧ್ಯವಿಲ್ಲ. ಶೀಘ್ರದಲ್ಲಿಯೇ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ಹಫೀಜ್ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...