alex Certify
ಕನ್ನಡ ದುನಿಯಾ       Mobile App
       

Kannada Duniya

ಗೃಹ ಬಂಧನದಿಂದ ಹಫೀಜ್ ಸಯೀದ್ ಮುಕ್ತ

26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಲಷ್ಕರ್ –ಇ-ತೋಯ್ಬಾ ಉಗ್ರ ಸಂಘಟನೆಯ ನಾಯಕ ಹಫೀಜ್ ಸಯೀದ್ ಗೃಹ ಬಂಧನದಿಂದ ಮುಕ್ತಗೊಂಡಿದ್ದಾನೆ. ಪಾಕಿಸ್ತಾನದ ಲಾಹೋರ್ ಕೋರ್ಟ್ ಹಫೀಜ್ ಸಹೀದ್ ನನ್ನು ಬಿಡುಗಡೆ ಮಾಡಿದೆ. ಈ ವರ್ಷ ಜನವರಿಯಲ್ಲಿ ಹಫೀಜ್ ನನ್ನು ಪಾಕ್ ಬಂಧಿಸಿತ್ತು.

ಕ್ಲಿನ್ ಚೀಟ್ ಸಿಕ್ಕ ಹಿನ್ನೆಲೆಯಲ್ಲಿ ಹಫೀಜ್ ಸಯೀದ್ ಗೃಹ ಬಂಧನದಿಂದ ಬಿಡುಗಡೆಯಾಗಲಿದ್ದಾನೆ. ಆತನನ್ನು ಯಾಕೆ ಗೃಹ ಬಂಧನದಲ್ಲಿಡಲಾಗಿದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಗಳಿರಲಿಲ್ಲ. ಸಾಕ್ಷ್ಯಾಧಾರದ ಕೊರತೆಯಿಂದ ಈತನನ್ನು ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟ್ ಹೇಳಿದೆ.

ಮುಂಬೈ ದಾಳಿಗೆ ಈತನೇ ಕಾರಣ ಎನ್ನುವ ಬಗ್ಗೆ ಭಾರತ ಈಗಾಗಲೇ ಅನೇಕ ಸಾಕ್ಷ್ಯಗಳನ್ನು ನೀಡಿದೆ. ಜೊತೆಗೆ ಮಂಗಳವಾರ ಪಂಜಾಬ್ ಪ್ರಾಂತ್ಯದ ಸರ್ಕಾರ ಲಾಹೋರ್ ಕೋರ್ಟ್ ಮುಂದೆ ಮನವಿ ಕೂಡ ಮಾಡಿತ್ತು. ಒಂದು ವೇಳೆ ಹಫೀಜ್ ಬಿಡುಗಡೆಯಾದಲ್ಲಿ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ನಿರ್ಬಂಧ ಎದುರಾಗುವ ಸಾಧ್ಯತೆಯಿದೆ. ಹಾಗಾಗಿ ಗೃಹ ಬಂಧನದಿಂದ ಬಿಡುಗಡೆ ಮಾಡಬೇಡಿ ಎಂದು ಪಂಜಾಬ್ ಗೃಹ ವಿಭಾಗ ಹೇಳಿತ್ತು. ಇನ್ನೂ ಮೂರು ತಿಂಗಳ ಗೃಹ ಬಂಧನ ಮುಂದುವರೆಸುವಂತೆ ಮನವಿ ಮಾಡಿತ್ತು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...