alex Certify
ಕನ್ನಡ ದುನಿಯಾ       Mobile App
       

Kannada Duniya

ವೀಸಾ ಸಂಕಷ್ಟದಿಂದಾಗಿ ಕೆನಡಾದತ್ತ ಮುಖಮಾಡಿದ್ದಾರೆ ಭಾರತದ ಟೆಕ್ಕಿಗಳು

H-1B ವೀಸಾ ಬಗ್ಗೆ ಅಮೆರಿಕ ತಳೆದಿರುವ ಕಠಿಣ ನಿಲುವು ಭಾರತೀಯರಿಗೆ ಸಂಕಷ್ಟ ತಂದಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಅತಂತ್ರ ಸ್ಥಿತಿಗೆ ತಲುಪುವ ಆತಂಕ ಎದುರಾಗಿದೆ. ಯಾಕಂದ್ರೆ ಅಮೆರಿಕ H-1B ವೀಸಾ ಅವಧಿ ವಿಸ್ತರಣೆಯನ್ನೇ ನಿಲ್ಲಿಸಲು ಮುಂದಾಗಿದೆ.

ಹಾಗಾದಲ್ಲಿ 50000-75000 ಭಾರತೀಯರು ತವರಿಗೆ ವಾಪಸ್ಸಾಗಬೇಕಾಗುತ್ತದೆ. ಈಗಾಗ್ಲೇ ಹಲವರ ವೀಸಾ ವಿಸ್ತರಣೆ ಬಾಕಿಯಿದ್ದು, ಮುಂದೇನು ಅನ್ನೋ ಆತಂಕ ಶುರುವಾಗಿದೆ. ಅಲ್ಲಿಂದ ಭಾರತಕ್ಕೆ ಮರಳಿದ್ರೂ ಇಲ್ಲಿ ನಿರುದ್ಯೋಗ ಕಾಡಬಹುದು, ಕೆಲಸ ಹುಡುಕುವುದು ಕಷ್ಟವಾಗಬಹುದು.

ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಅಮೆರಿಕದಲ್ಲಿ ನೆಲೆಸಿರುವ ಕೆಲವು ಭಾರತೀಯರು ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ. ಕೆನಡಾದತ್ತ ಮುಖ ಮಾಡಿದ್ದಾರೆ. ಅಲ್ಲಿನ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ.

H-1B ವೀಸಾವನ್ನು 3 ವರ್ಷಗಳ ಅವಧಿಗೆ ನೀಡಲಾಗುತ್ತದೆ. ಇನ್ಮೇಲೆ ಅದರ ವಿಸ್ತರಣೆ ಅಸಾಧ್ಯವಾದರೂ ಅಚ್ಚರಿಯಿಲ್ಲ. ಅಮೆರಿಕದ ಈ ನಿಲುವು ಭಾರತದ ಟೆಕ್ಕಿಗಳಿಗೆ ಸಮಸ್ಯೆ ತಂದಿದೆ. ಯಾಕಂದ್ರೆ ಅಮೆರಿಕದ ಐಟಿ ಕಂಪನಿಗಳಲ್ಲಿ ಭಾರತದ ಟೆಕ್ಕಿಗಳ ಸಂಖ್ಯೆ ಸಾಕಷ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...