alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಭಾವಿ ಪತ್ನಿಯ ಮಾಜಿ ಪ್ರೇಮಿಗೆ ಈತ ಬರೆದ ಪತ್ರ

love-33445ಮದುವೆಗೂ ಮುನ್ನ ಪ್ರೇಮ ಪ್ರಕರಣಗಳು ಸರ್ವೇಸಾಮಾನ್ಯ. ಕೆಲವೊಂದು ವಿವಾಹ ಬಂಧನದಲ್ಲಿ ಸುಖಾಂತ್ಯವಾದ್ರೆ ಇನ್ನು ಕೆಲವು ಮುರಿದು ಬೀಳುತ್ತವೆ. ಭಾವಿಪತ್ನಿಗೊಬ್ಬ ಪ್ರೇಮಿ ಇದ್ದ ಅನ್ನೋದು ಗೊತ್ತಾದ್ರೆ ಸಂಬಂಧ ಕಡಿದುಕೊಳ್ಳುವವರೇ ಹೆಚ್ಚು.

ಆದ್ರೆ ಇಲ್ಲೊಬ್ಬ ಡಿಫರೆಂಟ್ ಕೆಲಸವೊಂದನ್ನು ಮಾಡಿದ್ದಾನೆ. ಬ್ರಿಟನ್ ನ ಟ್ಯಾಟೂ ಕಲಾವಿದ ರಿಯಾನ್ ಮಾರ್ಚ್ ತಮ್ಮ ಭಾವಿ ಪತ್ನಿ ಕಲೀ ರೈಟ್ ಳ ಮಾಜಿ ಪ್ರೇಮಿಗೆ ಪತ್ರವೊಂದನ್ನು ಬರೆದಿದ್ದಾನೆ. ಫೇಸ್ ಬುಕ್ ನಲ್ಲಿ ರಿಯಾನ್ ಬರೆದ ಪತ್ರ ವೈರಲ್ ಆಗಿದೆ. 35,000ಕ್ಕೂ ಹೆಚ್ಚು ಮಂದಿ ಅದನ್ನು ಶೇರ್ ಮಾಡಿದ್ದಾರೆ. ಪತ್ರದಲ್ಲಿ ಆತ ಭಾವಿಪತ್ನಿಯ ಮಾಜಿ ಪ್ರೇಮಿಗೆ ಬೈಯ್ದಿದ್ದಾನೆ ಅಂದ್ಕೋಬೇಡಿ, ಧನ್ಯವಾದ ಹೇಳಿದ್ದಾನೆ. ಪತ್ರದ ಸಾರಾಂಶ ಏನಿದೆ ನೋಡೋಣ.

ಅವಳನ್ನು ಬಿಟ್ಟುಕೊಟ್ಟವನಿಗೆ,

ಅವಳ ಬದುಕಿನಿಂದ ಹೊರನಡೆದಿದ್ದಕ್ಕೆ ಧನ್ಯವಾದ. ಅವಳನ್ನು ಪ್ರೀತಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ. ಅವಳನ್ನು ನೋಯಿಸಿದ್ದಕ್ಕೆ ಧನ್ಯವಾದ, ಇಲ್ಲದೇ ಇದ್ರೆ ಅತ್ಯಮೂಲ್ಯವಾದುದನ್ನು ಅವಳು ಕಲಿಯುತ್ತಿರಲಿಲ್ಲ. ಅವಳಿಗೆ ನೋವುಂಟು ಮಾಡದಿರಲು ನಾನು ಪ್ರಯತ್ನಿಸುತ್ತೇನೆ. ಅವಳು ಅಳೋದನ್ನು ನೋಡಿದ್ರೆ ನನಗೆ ನೋವಾಗುತ್ತದೆ. ನಿನ್ನಿಂದ ಏನೇನು ಸಾಧ್ಯವಾಗಿಲ್ಲವೋ ಅದೆಲ್ಲವನ್ನೂ ನಾನು ಅವಳಿಗಾಗಿ ಮಾಡುತ್ತೇನೆ. ಅವಳ ದೂರು, ದುಮ್ಮಾನ, ಕಥೆ, ಖುಷಿ, ದುಃಖ ಎಲ್ಲದಕ್ಕೂ ಜೊತೆಯಾಗುತ್ತೇನೆ. ನೀನು ಮೆಚ್ಚಿಕೊಳ್ಳದ ಅವಳ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ. ಅವಳು ನನ್ನೊಂದಿಗಿರಲು ಏನು ಬೇಕಾದರೂ ಮಾಡುತ್ತೇನೆ. ಅವಳನ್ನು ಪ್ರೀತಿಸುವುದೇ ನನ್ನ ಬದುಕಿನ ಧ್ಯೇಯ. ನಾನವಳ ಜೊತೆಗಾರನಾಗಿ ಬದುಕಿನುದ್ದಕ್ಕೂ ಸಾಥ್ ಕೊಡುತ್ತೇನೆ. ನೀನು ಮಾಡಿದ ತಪ್ಪನ್ನು ನಾನೆಂದೂ ಮಾಡುವುದಿಲ್ಲ. ನನ್ನನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳುತ್ತೇನೆ ಎಂದು ಬರೆದಿದ್ದಾನೆ ರಿಯಾನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...