alex Certify
ಕನ್ನಡ ದುನಿಯಾ       Mobile App
       

Kannada Duniya

ಗುಂಡು ಹಾರಿಸಿ ರೇಡಿಯೋ ಕಾಮೆಂಟೇಟರ್ ಹತ್ಯೆ

ದುಷ್ಕರ್ಮಿಯೊಬ್ಬ ರೇಡಿಯೋ ಕಾಮೆಂಟೇಟರ್ ಒಬ್ಬರ ಮೇಲೆ 12 ಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಫಿಲಿಫೈನ್ಸ್ ನಲ್ಲಿ ನಡೆದಿದೆ. ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಇಡೀ ರಾಷ್ಟ್ರ ಈ ದಾಳಿಯನ್ನ ನೋಡಿ ಆತಂಕಕ್ಕೊಳಗಾಗಿದೆ.

38 ವರ್ಷದ ಜಾಯ್ ಲಾನಾ ಕೆಲಸಕ್ಕೆ ಬರೋದಕ್ಕೆ ವ್ಯಾನ್ ಏರುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ. ಫಿಲಿಫೈನ್ಸ್ ನ ಅಲ್ಬೆ ಪ್ರಾವಿನೆಸ್ ನಲ್ಲಿರುವ ನಗರದಲ್ಲಿನ ಮನೆಯ ಸಮೀಪದಲ್ಲಿ ಈ ಶೂಟೌಟ್ ನಡೆದಿದೆ. ಘಟನೆಯ ನಂತರದಲ್ಲಿ ದುಷ್ಕರ್ಮಿ ಪರಾರಿಯಾಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ. ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಈ ಘಟನೆಯನ್ನು ಖಂಡಿಸಿದೆ. ರೋಡಿಗೋ ಡ್ಯುಟರೇಟ್ ಫಿಲಿಫೈನ್ಸ್ ಅಧ್ಯಕ್ಷರಾದ ಬಳಿಕ ಪತ್ರಕರ್ತರ ಮೇಲೆ ನಡೆಯುತ್ತಿರುವ 12 ನೇ ಕೊಲೆ ಪ್ರಕರಣ ಇದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...