alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆಕೆಳಗಾಗಿ ನೇತಾಡುತ್ತಿದ್ದ 19 ಮಂದಿಯ ರಕ್ಷಣೆ

ಅಮೆರಿಕಾದ ಪುಯಾಲಪ್ನಲ್ಲಿ ನಡೆದ ಆತಂಕಕಾರಿ ಸನ್ನಿವೇಶದಲ್ಲಿ 19 ಮಂದಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ವಾಷಿಂಗ್ಟನ್‌ನ ಉತ್ಸವವೊಂದರಲ್ಲಿ ಸ್ಪಿನ್ನಿಂಗ್‌ ವೀಲ್‌ ಇದ್ದಕ್ಕಿದ್ದಂತೆಯೇ ಸ್ಥಗಿತಗೊಂಡ ಪರಿಣಾಮ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಲೆಕೆಳಗಾಗಿ ಬೊಬ್ಬೆ ಹೊಡೆಯುತ್ತಿದ್ದ ಮಕ್ಕಳು ಇನ್ನಿತರರು ಒಂದು ಕ್ಷಣಕ್ಕೆ ಜೀವವೇ ಹೋದ ಅನುಭವ ಪಡೆದಿದ್ದಾರೆ.

ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, 10 ನಿಮಿಷದಲ್ಲಿ ಸ್ಪಿನ್ನಿಂಗ್‌ ವೀಲ್‌ನಲ್ಲಿದ್ದ ಎಲ್ಲರನ್ನೂ ರಕ್ಷಿಸಿದ್ದಾರೆ. ಕಾರ್ಯಾಚರಣೆ ಬಗ್ಗೆ ಕ್ಷಣಕ್ಷಣದ ಮಾಹಿತಿಯನ್ನು ಪೊಲೀಸರು ಟ್ವಿಟರ್‌ ಮೂಲಕ ಶೇರ್‌ ಮಾಡಿದ್ದು, ಕಾರ್ಯಾಚರಣೆಯ ಫೋಟೋಗಳನ್ನೂ ಪೋಸ್ಟ್‌ ಮಾಡಿದ್ದಾರೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅದೃಷ್ಟವಷಾತ್‌ ಸ್ಪಿನ್ನಿಂಗ್‌ ವೀಲ್‌ ಅರ್ಧಕ್ಕೆ ನಿಂತಾಗ, ಸೀಟ್‌ ಬೆಲ್ಟ್‌ಗಳು ತೆರೆದುಕೊಂಡಿಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...