alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ವಿಶ್ವದಾಖಲೆ ನಿರ್ಮಿಸಿ ವಿಕಲಚೇತನರಾದ ಶ್ರೀಧರ್ ಚಿಲ್ಲಾಳ್

66 ವರ್ಷಗಳ ಕಾಲ ಎಡ ಕೈ ಬೆರಳಿನ ಉಗುರುಗಳನ್ನ ಬೆಳೆಸಿ ವಿಶ್ವದಾಖಲೆ ನಿರ್ಮಿಸಿದ್ದ 82ವರ್ಷದ ಶ್ರೀಧರ್ ಚಿಲ್ಲಾಳ್ ಇತ್ತೀಚೆಗಷ್ಟೇ ತಮ್ಮ ಉಗುರುಗಳನ್ನ ಕತ್ತರಿಸಿದ್ದರು.

ಶ್ರೀಧರ್ ಅವರ ಕೈ ಬೆರಳಿನ ಉಗುರುಗಳನ್ನ ಈಗ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ನ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಆದ್ರೆ ಶಾಕಿಂಗ್ ವಿಚಾರ ಏನಂದ್ರೆ ಉಗುರು ಬೆಳೆಸಿದ ಕಾರಣದಿಂದಲೇ ಶ್ರೀಧರ್ ಅವರು ಅಂಗವಿಕಲತೆಗೆ ಗುರಿಯಾಗಬೇಕಾಗಿದೆ.

ಹೌದು. ಶಿಕ್ಷಕರಿಗೆ ಸವಾಲು ಹಾಕಿ 1952 ನೇ ಇಸವಿಯಿಂದ ಉಗುರು ಬೆಳೆಸೋಕೆ ಶುರುಮಾಡಿದ ಶ್ರೀಧರ್ ಇಲ್ಲಿಯವರೆಗೂ 31 ಅಡಿ ಉದ್ದಕ್ಕೆ ಉಗುರು ಬೆಳೆಸಿದ್ದರು. ಅದರ ಪರಿಣಾಮ ಉಗುರುಗಳ ಭಾರ ಹೆಚ್ಚಾಗಿ ಅದರ ಪರಿಣಾಮ ಕೈ ಮೇಲೂ ಆಯ್ತು. ನಂತರದಲ್ಲಿ ಚಿಲಾನ್ ಅವರ ಕೈ ಬೆರಳುಗಳು ಶಾಶ್ವತ ಅಂಗವಿಕಲತೆಗೆ ಒಳಗಾಗಿವೆ.
ಕೈ ಬೆರಳುಗಳನ್ನ ಅವರು ತೆರೆಯೋದಕ್ಕೆ , ಮಡಚೋದಕ್ಕೆ ಸಾಧ್ಯವಾಗೋದಿಲ್ಲ. ಹಾಗಿದ್ದರು ಅವರ ನಿತ್ಯ ಜೀವನಕ್ಕೆ ಇದರಿಂದ ತೊಂದರೆ ಆಗಿಲ್ಲವಂತೆ. ಇದರ ನಡುವೆ ತನ್ನ ಉಗುರುಗಳುವಿಶ್ವದಾಖಲೆ ನಿರ್ಮಿಸಿದ ಬಗ್ಗೆ ಅವರಿಗೆ ಹೆಮ್ಮೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...