alex Certify
ಕನ್ನಡ ದುನಿಯಾ       Mobile App
       

Kannada Duniya

ತಿಮಿಂಗಿಲ ವಾಂತಿಯಿಂದ ಖುಲಾಯಿಸಿದೆ ಅದೃಷ್ಟ

sperm-whal

ಮಸ್ಕಟ್: ಅದೃಷ್ಟವಂತರಿಗೆ ಮಾತ್ರ ಲಾಟರಿಯಲ್ಲಿ ಬಂಪರ್ ಬಹುಮಾನ ಬರುತ್ತೆ ಎಂಬ ಮಾತಿದೆ. ಆದರೆ, ಅದೃಷ್ಟವಂತರಿಗೆ ಲಾಟರಿಯಲ್ಲಿ ಮಾತ್ರವಲ್ಲ, ಬೇರೆ ರೂಪದಲ್ಲಿಯೂ ಅದೃಷ್ಟ ಖುಲಾಯಿಸಬಹುದು. ಅದಕ್ಕೆ ಅತ್ಯುತ್ತಮ ನಿದರ್ಶನ ಇಲ್ಲಿದೆ ನೋಡಿ.

ಸ್ಪರ್ಮ್ ತಿಮಿಂಗಿಲದ ವಾಂತಿಗೆ ಭಾರೀ ಬೆಲೆ ಇದೆ ಎಂಬುದು ತಿಳಿದ ವಿಷಯವೇ. ಒಮನ್ ದೇಶದ ಮೂವರು ಮೀನುಗಾರರಿಗೆ ಬರೋಬ್ಬರಿ 80 ಕೆ.ಜಿ. ತೂಕದ ಸ್ಪರ್ಮ್ ತಿಮಿಂಗಿಲದ ವಾಂತಿ ದೊರೆತಿದೆ.

ಖಾಲಿದ್ ಅಲ್ ಸಿನಾನಿ ಮತ್ತು ಆತನ ಸಹಚರರು ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬರೋಬ್ಬರಿ 17 ಕೋಟಿ ರೂಪಾಯಿ ಮೌಲ್ಯದ ತಿಮಿಂಗಿಲದ ವಾಂತಿ ತೇಲುತ್ತಿರುವುದು ಕಂಡಿದೆ.

ತಡಮಾಡದೇ ಎಲ್ಲರೂ ಸೇರಿ ಅದನ್ನು ಸಂಗ್ರಹಿಸಿದ್ದಾರೆ. ಅದನ್ನು ದಡಕ್ಕೆ ತಂದು ಬಿಸಿಲಲ್ಲಿ ಒಣಗಿಸಿದ್ದಾರೆ. ಪೂರ್ಣ ಒಣಗಿದ ಬಳಿಕ ಅದನ್ನು ಕತ್ತರಿಸಿ ಮಾರಾಟ ಮಾಡಲಿದ್ದಾರೆ.

ವಾಂತಿ ಎಂದ ಕೂಡಲೇ ಹೆಚ್ಚಿನವರು ಮುಖ ಸಿಂಡರಿಸುತ್ತಾರೆ. ಆದರೆ, ತಿಮಿಂಗಿಲದ ವಾಂತಿ ಸಿಕ್ಕರೆ ಬಾಚಿಕೊಳ್ಳುತ್ತಾರೆ. ಸ್ಪರ್ಮ್ ತಿಮಿಂಗಿಲ ಆಹಾರವಾಗಿ ಸಮುದ್ರದ ಕೆಲವು ಜೀವಿಗಳನ್ನು ತಿನ್ನುತ್ತದೆ. ಕೆಲವೊಮ್ಮೆ ಆಹಾರ ಪದಾರ್ಥ ಗಟ್ಟಿಯಾಗಿ ಅದು ಆಂಬರ್ ಗ್ರೀಸ್ ಎಂಬುದರಿಂದ ಸುತ್ತುವರೆದಿರುತ್ತದೆ. ಜೀರ್ಣವಾಗದ ಈ ಪದಾರ್ಥವನ್ನು ತಿಮಿಂಗಿಲಗಳು ವಾಂತಿ ಮಾಡಿಕೊಳ್ಳುತ್ತವೆ.

ತೆಳುವಾದ ಮೇಣದ ರೂಪದಲ್ಲಿರುವ ಈ ವಸ್ತು ಸಮುದ್ರದಲ್ಲಿ ತೇಲುತ್ತದೆ. ದುರ್ವಾಸನೆ ಬೀರುವ ಇದು ಬಿಸಿಲಿಗೆ ಒಣಗಿದಂತೆಲ್ಲಾ ಗಟ್ಟಿಯಾಗಿ ಸುವಾಸನೆ ಬೀರುತ್ತದೆ. ಸೌಂದರ್ಯ ವರ್ಧಕ ಮತ್ತು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ.ಕಂಪನಿಗಳು ಕೋಟ್ಯಂತರ ಹಣ ಕೊಟ್ಟು ತಿಮಿಂಗಿಲ ವಾಂತಿಯನ್ನು ಖರೀದಿಸುತ್ತವೆ.

ಹೀಗೆ ಖಾಲಿದ್ ಅಲ್ ಸಿನಾನಿ ನೇತೃತ್ವದ ಮೂವರು ಮೀನುಗಾರರ ತಂಡ ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಸ್ಪರ್ಮ್ ತಿಮಿಂಗಿಲದ ಬರೋಬ್ಬರಿ 80 ಕೆ.ಜಿ. ವಾಂತಿ ದೊರೆತಿದ್ದು, ಇದಕ್ಕೆ 17 ಕೋಟಿ ರೂಪಾಯಿ ಬೆಲೆ ಇದೆ. ತಿಮಿಂಗಿಲ ವಾಂತಿಯಿಂದ ಅವರ ಅದೃಷ್ಟ ಖುಲಾಯಿಸಿದ್ದು, ಎಲ್ಲರೂ ಸಂಭ್ರಮಾಚರಣೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...