alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಬಳಕೆದಾರರನ್ನು ಬೆಚ್ಚಿ ಬೀಳಿಸುವ ಸುದ್ದಿ…!

ಇಂಗ್ಲೆಂಡ್ ಮೂಲದ ಸಂಸ್ಥೆಯೊಂದು ನಡೆಸಿದ ಸಂಶೋಧನಾ ವರದಿ ಓದಿದ್ರೆ, ನೀವು ನಿಮ್ಮ ಮೊಬೈಲ್ ಫೋನ್ ಮುಟ್ಟೋಕೋ ಹೆದರುತ್ತೀರಾ. ಏಕಪ್ಪಾ ಮೊಬೈಲ್ ನಲ್ಲಿ ಅಂತಹುದ್ದು ಏನಿದೆ ಎಂಬುದರ ವರದಿ ಇಲ್ಲಿದೆ.

ಪೋರ್ಟ್ಸ್ಮೌತ್ ಮೂಲದ ಗ್ಯಾಜೆಟ್ ಇನ್ಶುರೆನ್ಸ್ ಪ್ರೊವೈಡರ್ ನಡೆಸಿದ ಸಂಶೋಧನಾ ವರದಿಯಲ್ಲಿ ಆಘಾತಕಾರಿ ಸುದ್ದಿ ಬಯಲಾಗಿದೆ. ಶೌಚಾಲಯದಲ್ಲಿರುವ ಸೂಕ್ಷ್ಮ ಜೀವಾಣುಗಳಿಗಿಂತಲೂ, ಸ್ಮಾರ್ಟ್ ಫೋನ್ ಸ್ಕ್ರೀನ್ ಮೇಲೆ ಸೂಕ್ಷ್ಮ ಜೀವಾಣುಗಳು ಹೆಚ್ಚಿರುತ್ತವೆ ಎಂಬುದು ಬಹಿರಂಗವಾಗಿದೆ.

ಟಾಯ್ಲೆಟ್ ನಲ್ಲಿರುವ ಸೂಕ್ಷ್ಮ ಜೀವಿಗಳಿಗಿಂತಲೂ, ಮೂರು ಪಟ್ಟು ಕೊಳಕು ಮೊಬೈಲ್ ಸ್ಕ್ರೀನ್ ಮೇಲೆ ಇರುತ್ತದೆ. ಈ ವರದಿಯಲ್ಲಿ ಸೂಚಿಸಿದಂತೆ ಕೇವಲ 35 ಪ್ರತಿಶತ ಜನರು ತಮ್ಮ ಮೊಬೈಲ್ ಸ್ಕ್ರೀನ್ ಕ್ಲೀನ್ ಮಾಡುತ್ತಾರೆ. ಮೊಬೈಲ್ ಸ್ಕ್ರೀನ್ ಒರೆಸದೆ ಇರೋದ್ರಿಂದ, ಸೂಕ್ಷ್ಮಾಣುಗಳು ಕೂಡಿಕೊಳ್ಳುತ್ತವೆ ಎಂದು ವರದಿ ತಿಳಿಸಿದೆ.

ಸಂಶೋಧನೆಗೆ ನಡೆಸಲಾದ ವ್ಯಕ್ತಿಗಳಲ್ಲಿ ಸುಮಾರು 20 ಜನ ಮಾತ್ರ ವರ್ಷದಲ್ಲಿ ಎರಡು ಬಾರಿ ಮೊಬೈಲ್ ಸ್ಕ್ರೀನ್ ಕ್ಲೀನ್ ಮಾಡ್ತಾರೆ ಎಂಬುದು ತಿಳಿದು ಬಂದಿದೆ. ಸಂಶೋಧನಾ ವಿದ್ಯಾರ್ಥಿಗಳು ಐಫೋನ್-6, ಸ್ಯಾಮ್ಸಂಗ್ ಗ್ಯಾಲಕ್ಸಿ 8 ಮತ್ತು ಗೂಗಲ್ ಪಿಕ್ಸೆಲ್ ಮೊಬೈಲ್ ಗಳನ್ನು ಹೆಚ್ಚಾಗಿ ಸಂಶೋಧನೆಗೆ ತೆಗೆದುಕೊಂಡಿದ್ದಾರೆ.

ವರದಿಯ ಅನುಸಾರ ಮೊಬೈಲ್ ಸ್ಕ್ರೀನ್ ಮೇಲೆ ಸುಮಾರು 254.9 ಸೂಕ್ಷ್ಮ ಜೀವಾಣು ಘಟಕಗಳು ಕಂಡು ಬಂದ್ರೆ, ಟಾಯ್ಲೆಟ್ ನಲ್ಲಿ ಇದರ ಪ್ರಮಾಣ ಕೇವಲ 24 ಆಗಿದೆ. ಮೊಬೈಲ್ ಸ್ಕ್ರೀನ್ ಮೇಲಿನ ಸೂಕ್ಷ್ಮ ಜೀವಿಗಳಿಂದ ಚರ್ಮ ಸಮಸ್ಯೆ ಹಾಗೂ ಹಲವು ಆರೋಗ್ಯ ಸಮಸ್ಯೆ ಬರಬಹುದೆಂದು ವರದಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...