alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮಿಷದ ಮಟ್ಟಿಗೆ Google.com ಒಡೆಯನಾಗಿದ್ದವನಿಗೆ ಸಿಕ್ಕ ಹಣವೆಷ್ಟು ಗೊತ್ತಾ..?

google-reveals-how-much-it-paid-the-guy-who-bought-googlecom-for-one-minute--and-its-hysterical

ಕಳೆದ ವರ್ಷದ ಅಕ್ಟೋಬರ್ ನಲ್ಲಿ ನಡೆದಿದ್ದ ವಿದ್ಯಾಮಾನವೊಂದರಿಂದಾಗಿ ಗೂಗಲ್ ಮಾಜಿ ಉದ್ಯೋಗಿ ಭಾರತದ ಸನ್ಮಯ್ ವೇದ್ ರತ್ತ ಇಡೀ ವಿಶ್ವವೇ ನೋಡುವಂತಾಗಿತ್ತು.

ಮಾಹಿತಿ ತಂತ್ರಜ್ಞಾನದ ಸಂಸ್ಥೆ “Google.com” ಡೊಮೈನ್ ಅನ್ನು ಸನ್ಮಯ್ ವೇದ್ ಖರೀದಿಸಿದ್ದೇ ಇದಕ್ಕೆ ಕಾರಣ. ಅಂದು ಸನ್ಮಯ್ ವೇದ್ ಇಂಟರ್ನೆಟ್ ನೋಡುತ್ತಿರುವಾಗ “Google.com” ಡೊಮೈನ್ ಹೆಸರು ಲಭ್ಯವಿದೆ ಎಂದು ಕಂಡು ಬಂದಾಗ ಅದನ್ನು ಖರೀದಿಸಿದ್ದರು.

ಆದರೆ ಒಂದು ನಿಮಿಷದಲ್ಲೇ ಆಗಿರುವ ಪ್ರಮಾದವನ್ನು ಅರಿತ ಕಂಪನಿ, ಸನ್ಮಯ್ ವೇದ್ ಅವರ ಖರೀದಿಯನ್ನು ರದ್ದು ಮಾಡಿತ್ತು. ಅವರೂ ಕೂಡಾ ಆ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಆದರೆ ಗೂಗಲ್ ಕಂಪನಿ ಮಾತ್ರ ತನ್ನ ಮಾಜಿ ಉದ್ಯೋಗಿಗೆ ಭಾರೀ ಮೊತ್ತವನ್ನೇ ನೀಡಿದೆ.

ಒಂದು ನಿಮಿಷದ ಮಟ್ಟಿಗೆ “Google.com” ಒಡೆಯರಾಗಿದ್ದ ಸನ್ಮಯ್ ವೇದ್ ಅವರಿಗೆ ಗೂಗಲ್ 10 ಸಾವಿರಕ್ಕೂ ಅಧಿಕ ಡಾಲರ್ ನೀಡಿದೆ ಎಂದು ಹೇಳಲಾಗಿದೆ. ತಮಗೆ ದೊರೆತ ಈ ಹಣವನ್ನು ಸನ್ಮಯ್ ವೇದ್, ಭಾರತದ ‘ಆರ್ಟ್ ಆಫ್ ಲಿವಿಂಗ್’ ಗೆ ದೇಣಿಗೆಯಾಗಿ ನೀಡಿದ್ದು, ಶಿಕ್ಷಣಕ್ಕಾಗಿ ಈ ಹಣವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...