alex Certify
ಕನ್ನಡ ದುನಿಯಾ       Mobile App
       

Kannada Duniya

ಫೋಟೋಕ್ಕೆ ಫೋಸ್ ಕೊಡ್ತಿದ್ದ ವರ ಇದ್ದಕ್ಕಿದ್ದಂತೆ ಕೆರೆಗೆ ಜಿಗಿದ…!

ಮದುವೆ ಪ್ರತಿಯೊಬ್ಬರ ಜೀವನವನ್ನು ಬದಲಾಯಿಸುವ ದಿನ. ಮದುವೆಯಲ್ಲಿ ಸುಂದರವಾಗಿ ಕಾಣಬೇಕೆಂಬುದು ಎಲ್ಲರ ಕನಸು. ಮದುವೆಗೆ ಬರುವ ಎಲ್ಲರ ಕಣ್ಣು ವಧು-ವರರ ಮೇಲಿರುತ್ತದೆ. ಜೊತೆಗೆ ಫೋಟೋ, ವಿಡಿಯೋ ಮಾಡುವುದ್ರಿಂದ ಅದ್ರಲ್ಲಿ ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ ವಧು-ವರರು ಮೇಕಪ್ ಗೆ ಹೆಚ್ಚಿನ ಮಹತ್ವ ನೀಡ್ತಾರೆ.

ಕೆನಡಾದ ನವ ಜೋಡಿ ಕ್ಲೇಟನ್ ಹಾಗೂ ಬ್ರಿಟ್ನಿ ಕುಕ್ ಸುಂದರವಾಗಿ ಅಲಂಕಾರಗೊಂಡಿದ್ದರು. ಮದುವೆ ಮುನ್ನ ಪಾರ್ಕ್ ನಲ್ಲಿ ಫೋಟೋಕ್ಕೆ ಫೋಸ್ ಕೊಡ್ತಿದ್ದರು. ವರ ಕ್ಲೇಟನ್ ಏಕಾಏಕಿ ಪಾರ್ಕ್ ನಲ್ಲಿದ್ದ ಕೆರೆಗೆ ಹಾರಿದ್ದಾನೆ. ಇದನ್ನು ನೋಡಿ ಬ್ರಿಟ್ನಿ ಕಂಗಾಲಾಗಿದ್ದಾಳೆ. ಆದ್ರೆ ಕೆಲವೇ ಕ್ಷಣಗಳಲ್ಲಿ ಮಗುವೊಂದನ್ನು ಸುರಕ್ಷಿತವಾಗಿ ಹೊರ ತಂದ ಕ್ಲೇಟನ್ ನೋಡಿ ವಧು ಮುಖದಲ್ಲಿ ನಗು, ನೆಮ್ಮದಿ ಕಾಣಿಸಿದೆ.

ಪಾರ್ಕ್ ನಲ್ಲಿ ಆಟವಾಡ್ತಿದ್ದ ಮಗುವೊಂದು ಕಾಲು ಜಾರಿ ಕೆರೆಗೆ ಬಿದ್ದಿದೆ. ಇದನ್ನು ಫೋಟೋಕ್ಕೆ ಫೋಸ್ ನೀಡ್ತಿದ್ದ ಕ್ಲೇಟನ್ ನೋಡಿದ್ದಾನೆ. ಮದುವೆ ದಿನ, ಬಟ್ಟೆ, ಸೌಂದರ್ಯ ಯಾವುದನ್ನೂ ಲೆಕ್ಕಿಸದೆ ಕೆರೆಗೆ ಹಾರಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಕ್ಲೇಟನ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...