alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮಂಟಪಕ್ಕೆ ವರ ಎಂಟ್ರಿ ಕೊಟ್ಟಿದ್ದೇಗೆ ಅಂತ ಕೇಳಿದ್ರೆ ಅಚ್ಚರಿಪಡ್ತೀರಿ…!

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎಂಬುದು ಸುಂದರ ಘಳಿಗೆ. ಈ ಘಳಿಗೆಯನ್ನು ಸ್ಮರಣೀಯವಾಗಿಸಲು ವಿಭಿನ್ನ ಪ್ರಯತ್ನವನ್ನು ಕೆಲವರು ಮಾಡುತ್ತಾರೆ. ಈ ಹಿಂದೆ ವರನೊಬ್ಬ ತನ್ನ ಮದುವೆಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದಿದ್ದರೆ, ವಧುವೊಬ್ಬಳು ಕುದುರೆ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಬಂದಿದ್ದಳು.

ಪಾಕಿಸ್ತಾನದ ವರನೊಬ್ಬ ಮದುವೆ ಮಂಟಪಕ್ಕೆ ವಿಭಿನ್ನವಾಗಿ ಎಂಟ್ರಿ ಕೊಟ್ಟು ಈಗ ಸುದ್ದಿಯಲ್ಲಿದ್ದಾನೆ. ಈತ WWE ಅಭಿಮಾನಿಯಾಗಿದ್ದು, ಥೇಟ್ ಅಂಡರ್ ಟೇಕರ್ ಸ್ಟೈಲ್ ನಲ್ಲಿ ಬೆಲ್ಟ್ ಬೀಸುತ್ತ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾನೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಂದ ಹಾಗೇ ಈ ರೀತಿ ಮದುವೆ ಮಂಟಪಕ್ಕೆ ಈ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟಿರುವವರ ಪೈಕಿ ಈತ ಮೊದಲಿಗನೇನಲ್ಲ. ಈ ಹಿಂದೆಯೂ ಪಾಕಿಸ್ತಾನದ ವರನೊಬ್ಬ ಇದೇ ರೀತಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...