alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಕ್ಕುಗಳ ಜೊತೆ ಆಡಿದ್ರೆ ಸಿಗಲಿದೆ ಸಂಬಳ…!

ಗ್ರೀಸ್ ಸುತ್ತುವ ಬಯಕೆಯಿದ್ದು, ಬೆಕ್ಕಿನ ಮೇಲೆ ಪ್ರೀತಿಯಿರುವರಿಗೊಂದು ಖುಷಿ ಸುದ್ದಿ. ಗ್ರೀಸ್ ಕ್ಯಾಟ್ ಅಭಯಾರಣ್ಯದಲ್ಲಿ ಲಿವ್ ಇನ್ ಕೇರ್ ಟೇಕರ್ ಅಗತ್ಯವಿದೆ. ಈ ಕೆಲಸ ಭಿನ್ನವಾಗಿದೆ. ಕಡಲ ತೀರದ ದ್ವೀಪದಲ್ಲಿ ವಾಸವಾಗಿರುವ 55 ಬೆಕ್ಕುಗಳೊಂದಿಗೆ ದಿನನಿತ್ಯ ಆಟವಾಡಬೇಕು. ಇದಕ್ಕಾಗಿ ನಿಮಗೆ ಸಂಬಳ ಕೊಡಲಾಗುವುದು.

ಐಷಾರಾಮಿ ಕಾಟೇಜ್ ನಲ್ಲಿ ನಿಮಗೆ ವಾಸಕ್ಕೆ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಊಟ ಉಚಿತವಾಗಿ ಸಿಗಲಿದೆ. ಏಜಿಯನ್ ಸಮುದ್ರದಲ್ಲಿರುವ ದ್ವೀಪವೊಂದಲ್ಲಿ ನೀವು ಕೆಲಸ ಮಾಡಬೇಕಾಗುತ್ತದೆ. ದ್ವೀಪದಲ್ಲಿ ಗಾಡ್ಸ್ ಲಿಟಲ್ ಪೀಪಲ್ ಕ್ಯಾಟ್ ರೆಸ್ಕ್ಯೂ ಹೆಸರಿನ ಬೆಕ್ಕಿನ ಅಭಯಾರಣ್ಯವಿದೆ.

ಈ ಅಭಯಾರಣ್ಯದಲ್ಲಿ 55 ಬೆಕ್ಕುಗಳಿವೆ. ಬೆಕ್ಕುಗಳನ್ನು ನೋಡಿಕೊಳ್ಳುವ ವ್ಯಕ್ತಿಯೊಬ್ಬನ ಹುಡುಕಾಟದಲ್ಲಿದೆ ಸಿಬ್ಬಂದಿ. ಫೇಸ್ಬುಕ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಆರಂಭದಲ್ಲಿ 6 ತಿಂಗಳು ವಾಲಂಟಿಯರ್ ರೂಪದಲ್ಲಿ ನಿಮ್ಮನ್ನು ಇರಿಸಲಾಗುತ್ತದೆ. ನಂತ್ರ 1200 ಯುಎಸ್ ಡಾಲರ್ ಅಂದ್ರೆ ಸುಮಾರು 82 ಸಾವಿರದ 914 ರೂಪಾಯಿ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...