alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಮ್ಮಗನನ್ನೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ ಅಜ್ಜಿ, ಕಾರಣವೇನು ಗೊತ್ತಾ?

ಹಿರಿಯ ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದಾಗಿ ಅಮೆರಿಕಾದ ಮತ್ತೊಂದು ಶಾಲೆಯಲ್ಲಿ ನಡೆಯುತ್ತಿದ್ದ ದೊಡ್ಡ ದುರಂತ ತಪ್ಪಿದೆ. ಶಾಲೆಯೊಂದರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ತನ್ನ ಮೊಮ್ಮಗನನ್ನೇ ಈ ವೃದ್ಧ ಮಹಿಳೆ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾಳೆ.

ಪ್ಲೋರಿಡಾದಲ್ಲಿ ಶಾಲೆಯಿಂದ ತನ್ನನ್ನು ಹೊರಹಾಕಿದ್ದಾರೆಂಬ ಕಾರಣಕ್ಕೆ ಮಾಜಿ ವಿದ್ಯಾರ್ಥಿಯೊಬ್ಬ ಶಾಲೆಗೆ ನುಗ್ಗಿ 17 ಮಂದಿಯ ಸಾವಿಗೆ ಕಾರಣನಾಗಿದ್ದ ಘಟನೆ ನಡೆದ ದಿನವೇ ಈ ವಿದ್ಯಾರ್ಥಿಯ ಬಂಧನವಾಗಿದೆ.

ಕ್ಯಾಥರೀನ್ ಓ ಕನಾರ್ ಎಂಬ ವೃದ್ಧೆಯ 18 ವರ್ಷದ ಮೊಮ್ಮಗ, ವಾಷಿಂಗ್ಟನ್ ನ ಎಸಿಇಎಸ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲಾ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದ. ಇದಕ್ಕೆ ತಕ್ಕ ತಯಾರಿಗಳನ್ನು ಈತ ಮಾಡಿಕೊಂಡಿದ್ದ.

ತನ್ನ ಸಂಚಿನ ಕುರಿತು ಈತ ನೋಟ್ ಬುಕ್ ವೊಂದರಲ್ಲಿ ಬರೆದಿಟ್ಟಿದ್ದು, ಇದು ಆಕಸ್ಮಿಕವಾಗಿ ಅಜ್ಜಿಯ ಕೈಗೆ ಸಿಕ್ಕಿತ್ತು. ಅಲ್ಲದೆ ಆತನ ಕೋಣೆಯಲ್ಲಿ ಪಿಸ್ತೂಲ್ ಸಹ ಪತ್ತೆಯಾಗಿತ್ತು. ಇದರಿಂದ ಆತಂಕಗೊಂಡ ವೃದ್ಧ ಮಹಿಳೆ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದು, ತಕ್ಷಣವೇ ಶಾಲೆಗೆ ಧಾವಿಸಿದ ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಬಳಿ ಮರಿಜುವಾನಾ ಡ್ರಗ್ಸ್ ಹಾಗೂ ಒಂದು ಚಾಕು ಪತ್ತೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...