alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತಿರಲಿ, ಬದುಕಿರಲಿ ಇಲಿ ಹಿಡಿದ್ರೆ ಸಿಗುತ್ತೆ 20 ಸಾವಿರ..!

rat

ಇಲಿ ಹಿಡಿದ್ರೆ ಹಣ ಸಿಗುತ್ತೆ. ಅದು ನೂರು,ಇನ್ನೂರು ರೂಪಾಯಿಯಲ್ಲ. 20 ಸಾವಿರ ರೂಪಾಯಿ. ಈಗಾಗ್ಲೇ ಎಷ್ಟೆಲ್ಲ ಇಲಿ ಹಿಡಿದಿದ್ದೇವೆ. ಹಣ ಹೇಗೆ ಪಡೆಯೋದು ಸ್ವಾಮಿ ಅಂತಿದ್ದೀರಾ. ಈ ಸುದ್ದಿಯನ್ನು ಪೂರ್ತಿ ಓದಿದ್ರೆ ಹಣ ಹೇಗೆ ಪಡೆಯೋದು ಅಂತಾ ನಿಮಗೆ ಗೊತ್ತಾಗುತ್ತೆ.

ವಾಸ್ತವವಾಗಿ ಇಂಡೋನೇಷ್ಯಾದ ಜಕಾರ್ತಾದಲ್ಲಿ ಇಲಿಗಳ ಕಾಟ ಎಲ್ಲೆ ಮೀರಿದೆ. ಇಲಿಗಳು ದೊಡ್ಡ ಸಮಸ್ಯೆಯಾಗಿದೆ. ಜಕಾರ್ತಾದಲ್ಲಿ ಶುಚಿತ್ವ ಕಾಯ್ದುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಲಾಗ್ತಾ ಇದೆ. ಆದ್ರೆ ಇದಕ್ಕೆ ಇಲಿಗಳು ಅಡ್ಡಿಯುಂಟು ಮಾಡ್ತಾ ಇವೆ. ಇಲಿಗಳು ಆಹಾರ ಹಾಗೂ ಮಕ್ಕಳಿಗೆ ಹಾನಿಯುಂಟು ಮಾಡ್ತಿವೆ. ಇದರಿಂದ ಮುಕ್ತಿ ಪಡೆಯಲು ಮುಂದಾಗಿರುವ ಸರ್ಕಾರ ವಿಶೇಷ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಇಲಿ ಹಿಡಿದುಕೊಟ್ಟವರಿಗೆ 20 ಸಾವಿರ ರೂಪಾಯಿ ನೀಡುವುದಾಗಿ ಹೇಳಿದೆ.

ಜೀವಂತವಾಗಿರಲಿ ಇಲ್ಲ ಸತ್ತ ಇಲಿಯಾಗಿರಲಿ. ಜನರು ಇಲಿ ಹಿಡಿದು ಸರ್ಕಾರಿ ಅಧಿಕಾರಿಗಳಿಗೆ ನೀಡಬೇಕು. ತಕ್ಷಣ ಇಲಿ ಹಿಡಿದ ವ್ಯಕ್ತಿಗೆ 20 ಸಾವಿರ ರೂಪಾಯಿ ಸಿಗಲಿದೆ. ಆದ್ರೆ ಇಲಿ ಸಾಯಿಸಲು ಬಂದೂಕು ಬಳಸದಂತೆ ಸರ್ಕಾರ ಸೂಚನೆ ನೀಡಿದೆ. ಈ ಯೋಜನೆಗೆ ಜನ ಸಾಮಾನ್ಯರು ಕೈಜೋಡಿಸಲಿದ್ದಾರೆಂಬ ಭರವಸೆಯಲ್ಲಿದೆ ಸರ್ಕಾರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...