alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತವೆಸಗಿದ ಗೂಗಲ್ ಸ್ವಯಂ ಚಾಲಿತ ಕಾರ್

self-driving-cars

ಲಾಸ್ ಏಂಜೆಲೀಸ್: ಮುಂಬರುವ ದಿನಗಳಲ್ಲಿ ರಸ್ತೆಗಳ ಮೇಲೆ ಸಂಚರಿಸಲಿವೆ ಎಂದು ಹೇಳಲಾಗುತ್ತಿರುವ ಗೂಗಲ್ ಸಂಸ್ಥೆಯ ಸ್ವಯಂ ಚಾಲಿತ ಕಾರ್, ಸಾರ್ವಜನಿಕ ಬಸ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಈ ಕಾರ್ ಗೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಹಿನ್ನಡೆಯುಂಟಾಗುವಂತಾಗಿದೆ.

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಿದ್ದ ಈ ಸ್ವಯಂ ಚಾಲಿತ ಕಾರ್, ಬಸ್ ಗೆ ಉಜ್ಜಿಕೊಂಡು ಹೋಗಿದೆ. ಈ ವೇಳೆ ಕಾರ್ ಪ್ರತಿ ಗಂಟೆಗೆ 3 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದ್ದರೆ ಬಸ್ ಪ್ರತಿ ಗಂಟೆಗೆ 24 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತೆಂದು ತಿಳಿದುಬಂದಿದೆ.

ಅಪಘಾತದಲ್ಲಿ ಯಾರಿಗೂ ಅಪಾಯವಾಗಿಲ್ಲ. ಗೂಗಲ್ ನ ಈ ಸ್ವಯಂ ಚಾಲಿತ ಕಾರ್ ನಲ್ಲಿ ಟೆಸ್ಟ್ ಡ್ರೈವರ್ ಇದ್ದರಾದರೂ ಅವರಿಗೆ ಕಾರನ್ನು ಕೂಡಲೇ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಸಂಪೂರ್ಣ ಸೆನ್ಸರ್ ಆಧಾರದ ಮೇಲೆ ಈ ಸ್ವಯಂ ಚಾಲಿತ ಕಾರ್ ಸಂಚರಿಸುತ್ತಿದ್ದು, ಸಣ್ಣ ತಾಂತ್ರಿಕ ದೋಷದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...