alex Certify
ಕನ್ನಡ ದುನಿಯಾ       Mobile App
       

Kannada Duniya

ಥರ್ಡ್ ಪಾರ್ಟಿ ಆಪ್‌ಗಳು ಈಗಲೂ ನಿಮ್ಮ ಜಿಮೇಲ್ ಓದುತ್ತವೆ…!

ಥರ್ಡ್ ಪಾರ್ಟಿ ಆಪ್‌ ಡೆವಲಪರ್‌ಗಳು ನಿಮ್ಮ ಜಿಮೇಲ್‌ ಅನ್ನು ಓದಬಹುದು ಎಂಬುದಾಗಿ ಜುಲೈನಲ್ಲಿ ಸುದ್ದಿಯಾಗಿತ್ತು. ಆಗ ಗೂಗಲ್ ತನ್ನ ಥರ್ಡ್ ಪಾರ್ಟಿ ಆಪ್‌ಗಳಿಗೆ ಜಿ ಮೇಲ್ ಖಾತೆಗಳ ಡಾಟಾ ಲಭ್ಯತೆ ಹಾಗೂ ಹಂಚಿಕೆ ಕುರಿತ ತನ್ನ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡಿತ್ತು.

ಥರ್ಡ್ ಪಾರ್ಟಿ ಡೆವಲಪರ್‌ಗಳು ಇ ಮೇಲ್ ಪ್ಲಾಟ್‌ಫಾರಂನೊಂದಿಗೆ ಸಂಯೋಜಿತ ಸೇವೆಯನ್ನು ನೀಡಲು ಜಿ ಮೇಲ್ ಅವಕಾಶ ನೀಡುತ್ತಿದೆ ಎಂಬುದಾಗಿ ಅಮೆರಿಕದ ಸಿಎನ್ಎನ್ ಮನಿ ವರದಿ ಮಾಡಿದೆ.

ತಾವು ಡಾಟಾವನ್ನು ಹೇಗೆ ಬಳಸುತ್ತೇವೆ ಎಂಬ ಬಗ್ಗೆ ಬಳಕೆದಾರರೊಂದಿಗೆ ಪಾರದರ್ಶಕವಾಗಿರುವ ತನಕ ಥರ್ಡ್ ಪಾರ್ಟಿಗಳೊಂದಿಗೆ ಡೆವಲಪರ್‌ಗಳು ಡೇಟಾವನ್ನು ಹಂಚಿಕೊಳ್ಳಬಹುದು. ಪ್ರವೇಶ ನೀಡಬೇಕೇ ಬೇಡವೇ ಎಂಬುದಾಗಿ ನಿರ್ಧರಿಸುವ ಮುನ್ನ ಬಳಕೆದಾರರಿಗೆ ಅವಲೋಕಿಸಲು ಪ್ರೈವೆಸಿ ಪಾಲಿಸಿಯು ಸುಲಭವಾಗಿ ಲಭ್ಯವಿದೆ ಎಂದು ಗೂಗಲ್, ಅಮೆರಿಕದ ಸೆನೆಟರ್‌ಗಳಿಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದೆ.

ಖಾಸಗಿತನವನ್ನು ಕಾಪಾಡುವುದಾಗಿ ಗೂಗಲ್ ಹೇಳಿದ ಬಳಿಕವೂ ಥರ್ಡ್ ಪಾರ್ಟಿ ಆಪ್ ಡೆವಲಪರ್‌ಗಳಿಗೆ ಜಿಮೇಲ್ ಖಾತೆಗಳನ್ನು ಸ್ಕ್ಯಾನ್ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಜುಲೈನಲ್ಲಿ ವರದಿ ಮಾಡಿತ್ತು. ಅದಕ್ಕೆ ಗೂಗಲ್ ಈ ಸ್ಪಷ್ಟೀಕರಣ ನೀಡಿದೆ. ಜಿಮೇಲ್ ಈಗಾಗಲೇ ಜಾಗತಿಕವಾಗಿ 1.4 ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಅಂದರೆ ಇತರೆ 25 ಇಮೇಲ್ ಸೇವಾದಾತ ಕಂಪನಿಗಳ ಬಳಕೆದಾರರನ್ನು ಒಟ್ಟುಗೂಡಿಸಿದಷ್ಟು ಬಳಕೆದಾರರನ್ನು ಇದೊಂದೇ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...