alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಡ್ರಾಯ್ಡ್ ಬಗ್ ಪತ್ತೆ ಹಚ್ಚಿದ ಟೆಕ್ಕಿಗೆ ಸಿಕ್ಕಿದೆ ಭಾರೀ ಮೊತ್ತ

ಸ್ಮಾರ್ಟ್ ಫೋನ್ ಗಳ ತಯಾರಿಕೆ ವೇಳೆ ಅವುಗಳ ಸುರಕ್ಷತೆಯ ಕುರಿತೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಬಹುತೇಕ ಸ್ಮಾರ್ಟ್ ಫೋನ್ ಗಳಲ್ಲಿ ಅಂಡ್ರಾಯ್ಡ್ ಬಳಸಲಾಗುತ್ತಿದ್ದು, ಹೀಗಾಗಿ ಗೂಗಲ್, ಅಂಡ್ರಾಯ್ಡ್ ಓಎಸ್ ಕುರಿತು ಹೆಚ್ಚಿನ ನಿಗಾ ವಹಿಸುತ್ತದೆ.

ಸ್ಮಾರ್ಟ್ ಫೋನ್ ಮೂಲಕವೇ ಇಂದು ಬಹುತೇಕ ಕಾರ್ಯಗಳನ್ನು ಮೊಬೈಲ್ ಪೋನ್ ಬಳಕೆದಾರರು ಮಾಡುತ್ತಿರುವ ಕಾರಣ ಹ್ಯಾಕರ್ ಗಳಿಗೆ ಹ್ಯಾಕ್ ಮಾಡಲು ಸುಲಭವಾಗಬಾರದೆಂಬ ಕಾರಣಕ್ಕೆ ಸುರಕ್ಷತೆಯ ಕುರಿತು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಸುರಕ್ಷತೆಯಲ್ಲಿ ಕಂಡು ಬರುವ ಲೋಪದೋಷಗಳನ್ನು ಪತ್ತೆ ಹಚ್ಚಿ ತಿಳಿಸಿಕೊಟ್ಟವರಿಗೆ ಗೂಗಲ್ ಭಾರೀ ಮೊತ್ತವನ್ನು ಪುರಸ್ಕಾರವಾಗಿ ನೀಡುತ್ತಿದ್ದು, ಅಂಡ್ರಾಯ್ಡ್ ಬಗ್ ಪತ್ತೆ ಹಚ್ಚಿ ಈ ಕುರಿತು ಮಾಹಿತಿ ನೀಡಿದ್ದ ಗುವಾಂಗ್ ಗಾಂಗ್ ಎಂಬಾತನಿಗೆ ಗೂಗಲ್ 112,500 ಡಾಲರ್ (ಅಂದಾಜು 72 ಲಕ್ಷ ರೂ.) ಗಳನ್ನು ನೀಡಿದೆ. ಅಲ್ಲದೇ ಗುವಾಂಗ್ ಪತ್ತೆ ಹಚ್ಚಿದ್ದ ದೋಷವನ್ನು ತಕ್ಷಣವೇ ಸರಿ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...