alex Certify
ಕನ್ನಡ ದುನಿಯಾ       Mobile App
       

Kannada Duniya

4 ವರ್ಷದ ಹಿಂದೆ ಕಾಣೆಯಾಗಿದ್ದ ಮಲೇಷಿಯಾ ವಿಮಾನ ಪತ್ತೆ?

2014ರ ಮಾರ್ಚ್‌ನಲ್ಲಿ ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡು ಕಾಣೆಯಾಗಿದ್ದ ಮಲೇಷಿಯಾ ಏರ್‌ಲೈನ್ಸ್‌ ಎಂಎಚ್‌370 ವಿಮಾನದ ಗುರುತನ್ನು ಇಂಗ್ಲೆಂಡ್‌ನ ತಜ್ಞರು ಗುರುತಿಸಿದ್ದಾರೆ.

ಕಾಂಬೋಡಿಯಾದ ದಟ್ಟ ಅರಣ್ಯದಲ್ಲಿ ವಿಮಾನ ಪತನವಾಗಿರುವ ಬಗ್ಗೆ ತಜ್ಞರು ಅಭಿಪ್ರಾಯಪಟ್ಟಿದ್ದು, ಗೂಗಲ್‌ ಮ್ಯಾಪ್‌ನ ಮೂಲಕ ವಿಮಾನ ಇರುವ ಸ್ಥಳವನ್ನು ಗುರುತಿಸಿದ್ದಾರೆ ಎಂದು ಹೇಳಲಾಗಿದೆ.

ಗೂಗಲ್‌ ಸೈಟಿಂಗ್‌ನಲ್ಲಿ ದಟ್ಟ ಅಡವಿಯ ನಡುವೆ ವಿಮಾನದ ರೆಕ್ಕೆ, ಎದುರಿನ ಭಾಗ ಹಾಗೂ ಹಿಂಭಾಗದ ಮಾದರಿಯಲ್ಲಿ ವಸ್ತುಗಳನ್ನು ಗುರುತಿಸಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಎಂಎಚ್‌370 ವಿಮಾನ 2014 ರ ಮಾ. 8ರಂದು ಕೌಲಲಂಪುರದಿಂದ ಬೀಜಿಂಗ್‌ಗೆ 12 ಮಂದಿ ಸಿಬ್ಬಂದಿ ಹಾಗೂ 227 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಮಲೇಷಿಯಾ ಏರ್‌ ಟ್ರಾಫಿಕ್‌ ನಿಯಂತ್ರಕರಿಂದ ವಿಯೆಟ್ನಾಂ ನಿಯಂತ್ರಕರಿಗೆ ವರ್ಗಾವಣೆ ವೇಳೆ ಸಂಪರ್ಕ ಕಡಿದು ವಿಮಾನ ಕಾಣೆಯಾಗಿತ್ತು. ವಿಮಾನಕ್ಕಾಗಿ ಸತತ ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...