alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲೇ ಸ್ಟೋರ್ ನಲ್ಲಿ ಲಭ್ಯ Google Maps Go ಆಪ್….

ಗೂಗಲ್ ಮ್ಯಾಪ್ಸ್ ಗೋ ಆ್ಯಪ್ ಈಗ ಪ್ಲೇ ಸ್ಟೋರ್ ನಲ್ಲೂ ಲಭ್ಯವಿದೆ. ಬಳಕೆದಾರರು ಅದನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. 512 ಎಂಬಿ-1ಜಿಬಿ RAM ಸ್ಮಾರ್ಟ್ ಫೋನ್ ಗಳಿಗಾಗಿ ಇತ್ತೀಚೆಗಷ್ಟೆ ಗೂಗಲ್ Android Oreo ಅನ್ನೋ ಆಪರೇಟಿಂಗ್ ಸಿಸ್ಟಮ್ ಒಂದನ್ನು ಲಾಂಚ್ ಮಾಡಿತ್ತು.

ಹೊಸ ಗೂಗಲ್ ಮ್ಯಾಪ್ಸ್ ಗೋ ಕೂಡ ಲೈಟ್ ವೇಯ್ಟ್ ಆ್ಯಪ್ ಗಳಲ್ಲೊಂದು. ಫೈಲ್ಸ್ ಗೋ ಮತ್ತು ಗೂಗಲ್ ಗೋ ಸ್ಟೋರ್ ಕೂಡ ಕೆಲದಿನಗಳ ಹಿಂದಷ್ಟೇ ಡೌನ್ಲೋಡ್ ಗೆ ಲಭ್ಯವಾಗಿತ್ತು. ಇಂಥದ್ದೇ ಆ್ಯಪ್ ಗಳಾದ ಗೂಗಲ್ ಅಸಿಸ್ಟಂಟ್ ಮತ್ತು ಜಿಮೇಲ್ ಅನ್ನು ಸದ್ಯದಲ್ಲೇ ಲಾಂಚ್ ಮಾಡಲು ಕಂಪನಿ ಸಿದ್ಧತೆ ನಡೆಸಿದೆ.

ಗೂಗಲ್ ಮ್ಯಾಪ್ಸ್ ಗೋ ಆ್ಯಂಡ್ರಾಯ್ಡ್ ಡಿವೈಸ್ ಗಳಿಗಾಗಿಯೇ ವಿಶಿಷ್ಟವಾಗಿ ತಯಾರಿಸಿರುವ ಆ್ಯಪ್. ಪ್ರೋಗ್ರೆಸ್ಸಿವ್ ವೆಬ್ ಆ್ಯಪ್ ಗಳಿಗೆ ಶಾರ್ಟ್ ಕಟ್ ಆಗಿ ಇದನ್ನು ಬಳಸಬಹುದು. 70 ದೇಶಗಳಲ್ಲಿ ಇದನ್ನು ಬಳಸಬಹುದಾಗಿದೆ. ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಗೆ ಹೆಚ್ಚು ಸ್ಪೇಸ್ ಕೂಡ ಬೇಕಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...