alex Certify
ಕನ್ನಡ ದುನಿಯಾ       Mobile App
       

Kannada Duniya

ಪಕ್ಕದ ಮನೆಯವರ ಬಗ್ಗೆಯೂ ಮಾಹಿತಿ ನೀಡಲಿದೆ ಗೂಗಲ್

ಪೇಮೆಂಟ್ ಆ್ಯಪ್, ಫುಡ್ ಡಿಲೆವರಿ ಆ್ಯಪ್ ನಂತ್ರ ಗೂಗಲ್ ನ ನೆಕ್ಸ್ಟ್ ಬಿಲಿಯನ್ ಟೀಮ್ ಕ್ಯೂ ಎಂಡ್ ಎ ಆ್ಯಪ್ ಬಿಡುಗಡೆ ಮಾಡಿದೆ. ಈ ಆ್ಯಪ್ ಹೆಸರು Neighbourly. ಸ್ಥಳೀಯ ಜ್ಞಾನವನ್ನು ವೃದ್ಧಿಸಿಕೊಳ್ಳಲು ಈ ಆ್ಯಪ್ ಶುರು ಮಾಡಲಾಗಿದೆ. ಈ ಆ್ಯಪ್ ಬಳಕೆದಾರರ ಅಕ್ಕಪಕ್ಕದ ನಿವಾಸಿಗಳ ಬಗ್ಗೆ ಮಾಹಿತಿ ನೀಡುತ್ತದೆ.

ಬಳಕೆದಾರರು ವಾಸವಾಗಿರುವ ಪ್ರದೇಶ, ಅಕ್ಕಪಕ್ಕದ ಜನ, ಅಲ್ಲಿನ ಜೀವನ ಶೈಲಿ, ಆಹಾರ ಪದ್ಧತಿ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಆ್ಯಪ್ ಮಾಹಿತಿ ನೀಡುತ್ತದೆ. ಮೊದಲೆಲ್ಲ ಅಕ್ಕಪಕ್ಕದವರ ಬಗ್ಗೆ ತಿಳಿದಿರುತ್ತಿತ್ತು. ಸ್ಥಳೀಯ ಪ್ರದೇಶದಲ್ಲಿ ಏನಾಗ್ತಿದೆ ಎಂಬುದು ಗೊತ್ತಾಗ್ತಿತ್ತು. ನಗರ ಬೆಳೆದಂತೆಲ್ಲ ಮನೆ ಪಕ್ಕದಲ್ಲಿ ಯಾರಿದ್ದಾರೆ ಎಂಬುದೇ ತಿಳಿಯೋದಿಲ್ಲ. ನೆರೆಯವರನ್ನು ಹತ್ತಿರ ತರುವ ಉದ್ದೇಶದಿಂದ ಈ ಆ್ಯಪ್ ಸಿದ್ಧಪಡಿಸಲಾಗಿದೆ. ಬಳಕೆದಾರ ಪ್ರಶ್ನೆ ಕೇಳಬಹುದು, ಅಭಿಪ್ರಾಯ ಹಂಚಿಕೊಳ್ಳಬಹುದು, ಸುರಕ್ಷತೆಗೆ ಹೆಚ್ಚಿನ ಕ್ರಮಕೈಗೊಳ್ಳಬಹುದು.

ಈ ಆ್ಯಪ್ ಸೈನ್ ಅಪ್ ಮಾಡಲು ಹೆಸರೊಂದು ಸಾಕು. ಜಿಪಿಎಸ್ ನಂತ್ರ ನೀವಿರುವ ಸ್ಥಳದ ಬಗ್ಗೆ ಅದು ಮಾಹಿತಿ ನೀಡುತ್ತದೆ. ಎಲ್ಲವೂ ಸ್ವೈಪ್ ಕಾರ್ಡ್ ಮೂಲಕ ನಡೆಯುತ್ತದೆ. ಗೂಗಲ್ ಸುಮಾರು 100 ಬಳಕೆದಾರರ ಮೇಲೆ ಒಂದು ತಿಂಗಳು ಪರೀಕ್ಷೆ ನಡೆಸಿದೆ. ಬಳಕೆದಾರರ ಸುರಕ್ಷತೆ ಬಗ್ಗೆಯೂ ಹೆಚ್ಚು ಗಮನ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...