alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲೇ ಹೋದ್ರೂ ನಿಮ್ಮ ಬೆನ್ನ ಹಿಂದೆ ಇರುತ್ತೆ ಗೂಗಲ್…!

ಲೊಕೇಶನ್ ಹಿಸ್ಟರಿ ಆಫ್ ಮಾಡಿದರು ಕೂಡ ಲಾಗಿನ್ ಆದ ಕಡೆಯೆಲ್ಲಾ ಗೂಗಲ್ ನಿಮ್ಮ ಹಿಂದಿನ ಲಾಗ್ ಇನ್ ಆದ ಸ್ಥಳದ ಮಾಹಿತಿಯನ್ನ ನಿಮಗೆ ತಲುಪಿಸಬಹುದು. ಹೀಗೆ ಗೂಗಲ್ ಕಣ್ಣಿನಿಂದ ತಪ್ಪಿಸಿಕೊಳ್ಳದಂತಾ ಸಮಸ್ಯೆಯನ್ನು ನೀವು ಎದುರಿಸ್ತಿದ್ರೆ ಸುಲಭವಾಗಿ ಅದರಿಂದ ಪಾರಾಗಬಹುದು. ಅದಕ್ಕಾಗಿ ನೀವು ಕೆಲವು ಸೂತ್ರಗಳನ್ನು ಅನುಸರಿಸಬೇಕಷ್ಟೆ.

ಮೊದಲನೆಯದಾಗಿ ನೀವು ಲ್ಯಾಪ್ಟಾಪ್, ಸ್ಮಾರ್ಟ್ ಫೋನ್ ಅಥವಾ ಪರ್ಸನಲ್ ಕಂಪ್ಯೂಟರ್ ಗಳಲ್ಲಿ ನೀವು ಮೈ ಆಕ್ಟೀವ್ ಡಾಟ್ ಗೂಗಲ್ ಡಾಟ್ ಕಾಮ್ ಗೆ ಗೂಗಲ್ ಮೂಲಕವೇ ಪ್ರವೇಶ ಪಡೆಯಬೇಕು. ನಂತರದಲ್ಲಿ ಕಾಣುವ ಇನ್ ಆಕ್ಟೀವ್ ಕಂಟ್ರೋಲ್ ಆಯ್ಕೆಯಲ್ಲಿ ವೆಬ್ ಮತ್ತು ಆಪ್ ಆಕ್ಟಿವಿಟಿ ಮತ್ತು ಲೊಕೇಶನ್ ಹಿಸ್ಟರಿ ಆಯ್ಕೆಯನ್ನ ಟರ್ನ್ ಆಫ್ ಮಾಡಬೇಕು.

ಗೂಗಲ್ ಮ್ಯಾಪ್ ಗಳನ್ನ ನೀವು ಉಪಯೋಗಿಸ್ತಿದ್ರೆ ಅದ್ರಲ್ಲಿ ನಿಮ್ಮ ಲೊಕೇಶನ್ ಹಿಸ್ಟರಿ ಕಂಡು ಬರೋದು ಸಹಜ. ಅದರಲ್ಲಿ ಲೊಕೇಶನ್ ಹಿಸ್ಟರಿ ವೈಲ್ ಯೂಸಿಂಗ್ ಆಪ್ಷನ್ ಆಯ್ಕೆ ಮಾಡಿಕೊಂಡರೆ ಸಾಕು. ಅದಕ್ಕಾಗಿ ನೀವು ಗೂಗಲ್ ಸೆಟ್ಟಂಗ್ ನ ಪ್ರೈವೆಸಿ ಲೊಕೇಶನ್ಸ್ ಸೆಟ್ಟಿಂಗ್ ನ ಆಯ್ಕೆ ಮಾಡಿಕೊಳ್ಳಬೇಕು.
ಅಂಡ್ರಾಯ್ಡ್ ಸಾಧನಗಳನ್ನ ನೀವು ಬಳಕೆ ಮಾಡುತ್ತಿದ್ದರೆ ಅದರಲ್ಲಿರುವ ಸೆಕ್ಯುರಿಟಿ ಮತ್ತು ಲೊಕೇಶನ್ ಸೆಟ್ಟಿಂಗ್ಸ್ ನಲ್ಲಿ ಪ್ರೈವೇಸಿ ಮತ್ತು ಲೊಕೇಶನ್ ಬಟನ್ ಸ್ವಿಚ್ ಆಫ್ ಮಾಡುವ ಮೂಲಕ ಗೂಗಲ್ ಕಣ್ತಪ್ಪಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...