alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಕಿಂಗ್ ಲಾಟ್ ನಲ್ಲಿ ವಾಸಿಸ್ತಾರೆ ಗೂಗಲ್ ಉದ್ಯೋಗಿಗಳು! ಕಾರಣವೇನು ಗೊತ್ತಾ?

ಆಶ್ಚರ್ಯ ಆದ್ರೂ ಇದು ನಿಜ. ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿ ಗೂಗಲ್ ನ ಕೆಲ ಉದ್ಯೋಗಿಗಳು ಪಾರ್ಕಿಂಗ್ ಲಾಟ್ ನಲ್ಲಿ ವಾಸ ಮಾಡ್ತಾರೆ. ಗೂಗಲ್ ನಲ್ಲಿ ಕೆಲಸ ಸಿಕ್ಕರೆ ಜನ್ಮ ಸಾರ್ಥಕ ಎಂದು ಭಾವಿಸುವ ಹೊತ್ತಿನಲ್ಲಿ ಇದೆಂತ ಸುದ್ದಿ ಅಂತೀರಾ. ಹಾಗಾದ್ರೆ ಮುಂದೆ ಓದಿ.

ಹೌದು. ಗೂಗಲ್ ಸಂಸ್ಥೆಯ ಕೆಲ ಉದ್ಯೋಗಿಗಳು ಪಾರ್ಕಿಂಗ್ ಲಾಟ್ ನಲ್ಲಿ ವಾಸ ಮಾಡುತ್ತಿರುವುದು ಸತ್ಯ. ಮಾಹಿತಿ ತಂತ್ರಜ್ಞಾನ ಕಂಪನಿಗಳ ಪೈಕಿ ಗೂಗಲ್ ಕಂಪನಿ ಅತಿ ಹೆಚ್ಚು ಸಂಬಳ ನೀಡುವ ಹೆಗ್ಗಳಿಕೆ ಹೊಂದಿದ್ದರೂ ಕೆಲ ಉದ್ಯೋಗಿಗಳು ಪಾರ್ಕಿಂಗ್ ಲಾಟ್ ನಲ್ಲೇ ವಾಸ್ತವ್ಯ ಹೂಡಲು ಬಯಸುತ್ತಿದ್ದಾರೆ.

ಅದಕ್ಕೆ ಕಾರಣ ಗೂಗಲ್ ಮುಖ್ಯ ಕಛೇರಿಯಿರುವ ಸೌತ್ ಬೇ ನಲ್ಲಿನ ಮನೆಗಳಿಗೆ ಇರುವ ದುಬಾರಿ ಬಾಡಿಗೆ. ಈ ಕಾರಣಕ್ಕಾಗಿ ಹಲವರು ಪಾರ್ಕಿಂಗ್ ಲಾಟ್ ನಲ್ಲಿಯೇ ತಮ್ಮ ಕಾರಿನಲ್ಲಿ ಅಥವಾ ಟೆಂಟ್ ನಲ್ಲಿ ವಾಸ ಮಾಡುತ್ತಾರೆ. ನಿತ್ಯ ಕರ್ಮಗಳಿಗೆ ಕಂಪನಿಯ ರೆಸ್ಟ್ ರೂಮ್ ಹೇಗಿದ್ದರೂ ಇರುತ್ತದೆ. ಜೊತೆಗೆ ಗೂಗಲ್ ತನ್ನ ಉದ್ಯೋಗಿಗಳಿಗೆ ಉಚಿತವಾಗಿ ಉತ್ಕೃಷ್ಟ ಗುಣಮಟ್ಟದ ಆಹಾರ ನೀಡುತ್ತದೆ.

ಈ ಎಲ್ಲಾ ಕಾರಣಗಳಿಂದ ಹಲವು ಉದ್ಯೋಗಿಗಳು ಪಾರ್ಕಿಂಗ್ ಲಾಟ್ ನಲ್ಲಿಯೇ ಟೆಂಟ್ ಹೊಡೆದಿದ್ದು, ಈ ರೀತಿ ಎರಡ್ಮೂರು ವರ್ಷ ವಾಸಿಸಿ ಹಣ ಉಳಿಸಿದರೆ ಸ್ವಂತ ಮನೆಯನ್ನೇ ಖರೀದಿಸಬಹುದು ಎನ್ನುತ್ತಾರೆ ಅವರು. ಮತ್ತೇ ಕೆಲವರು ಈ ರೀತಿ ಹಣ ಉಳಿಸಿ ಪ್ರಪಂಚ ಪರ್ಯಟನೆ ಮಾಡುವ ಕನಸನ್ನು ಹೊಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...