alex Certify
ಕನ್ನಡ ದುನಿಯಾ       Mobile App
       

Kannada Duniya

FM ರೇಡಿಯೋಗೆ ಗುಡ್ ಬೈ ಹೇಳ್ತಿದೆ ನಾರ್ವೆ

fm

ನಾರ್ವೆ ಸದ್ಯದಲ್ಲೇ ಎಫ್ ಎಂ ರೇಡಿಯೋ ನೆಟ್ವರ್ಕ್ ಗೆ ಗುಡ್ ಬೈ ಹೇಳ್ತಾ ಇದೆ. ಎಫ್ ಎಂ ರೇಡಿಯೋ ನೆಟ್ವರ್ಕ್ ಬಂದ್ ಮಾಡಿ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗುತ್ತಿರುವ ಮೊಟ್ಟ ಮೊದಲ ದೇಶ ನಾರ್ವೆ.

ಸರ್ಕಾರ ಈ ಬಗ್ಗೆ ಆತುರದ ನಿರ್ಧಾರ ತೆಗೆದುಕೊಳ್ತಾ ಇದೆ. ಎಫ್ ಎಂ ರೇಡಿಯೋ ಬಂದ್ ಮಾಡೋದ್ರಿಂದ ಜನರಿಗೆ ತುರ್ತು ಪರಿಸ್ಥಿತಿಗಳ ಬಗ್ಗೆ ಮಾಹಿತಿ ಸಿಗದೇ ಹೋಗಬಹುದು ಅಂತಾ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೂ ಒಂದು ಸಮಸ್ಯೆ ಅಂದ್ರೆ ನಾರ್ವೆಯಲ್ಲಿ 2 ಮಿಲಿಯನ್ ಕಾರುಗಳಿಗೆ ಇದುವರೆಗೂ ‘ಡಿಜಿಟಲ್ ಆಡಿಯೋ ಬ್ರಾಡ್ ಕಾಸ್ಟಿಂಗ್’ ಅಳವಡಿಸಿಲ್ಲ. ಎಫ್ ಎಂ ಬಂದ್ ಮಾಡ್ತಾ ಇರೋ ಸರ್ಕಾರದ ನಿರ್ಧಾರವನ್ನ ಶೇ.66ರಷ್ಟು ಮಂದಿ ವಿರೋಧಿಸಿದ್ದಾರೆ.

ಡಿಎಬಿ ಅಳವಡಿಕೆಗೆ ಸಮ್ಮತಿಸಿದವರು ಶೇ.17ರಷ್ಟು ಜನರು ಮಾತ್ರ. ಉಳಿದವರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಕಳೆದ ತಿಂಗಳು ಎಫ್ ಎಂ ರೇಡಿಯೋ ನೆಟ್ವರ್ಕ್ ಬಂದ್ ಮಾಡಲು ನಾರ್ವೆ ಪಾರ್ಲಿಮೆಂಟ್ ನಲ್ಲಿ ಸಮ್ಮತಿ ದೊರೆತಿದ್ದು, ಮುಂದಿನ ವಾರ ಕಾರ್ಯರೂಪಕ್ಕೂ ಬರಲಿದೆ. 2020 ರಲ್ಲಿ ಇದೇ ರೀತಿ ಡಿಜಿಟಲೀಕರಣ ಮಾಡಲು ಸ್ವಿಡ್ಜರ್ಲೆಂಡ್ ಕೂಡ ಯೋಜನೆ ಹಮ್ಮಿಕೊಂಡಿದೆ. ಬ್ರಿಟನ್ ಹಾಗೂ ಡೆನ್ಮಾರ್ಕ್ ಕೂಡ ಈ ಬಗ್ಗೆ ಚಿಂತನೆ ನಡೆಸಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...