alex Certify
ಕನ್ನಡ ದುನಿಯಾ       Mobile App
       

Kannada Duniya

ರಷ್ಯಾ ವಿಮಾನ ನಿಲ್ದಾಣದ ರನ್ ವೇ ನಲ್ಲಿ ಚಿನ್ನದ ಮಳೆ…!

ರಷ್ಯಾದ ವಿಮಾನ ನಿಲ್ದಾಣವೊಂದರ ರನ್ ವೇ ನಲ್ಲಿ ಚಿನ್ನ, ವಜ್ರದ ಮಳೆಯಾಗಿದೆ. ಅಂದ ಹಾಗೇ ಇದು ಆಕಾಶದಿಂದ ಸುರಿದ ಮಳೆಯಲ್ಲ, ಬದಲಾಗಿ ವಿಮಾನ ಸಿಬ್ಬಂದಿ ಮಾಡಿದ ಯಡವಟ್ಟಿನಿಂದಾಗಿ ರನ್ ವೇ ತುಂಬೆಲ್ಲಾ ಎಲ್ಲೆಂದರಲ್ಲಿ ಚಿನ್ನ ಹಾಗೂ ವಜ್ರ ಚೆಲ್ಲಾಡಿದೆ.

ಇಂತದೊಂದು ಘಟನೆ ಗುರುವಾರದಂದು ರಷ್ಯಾದ Yakutsk ನಗರದಲ್ಲಿ ನಡೆದಿದ್ದು, ಚಿನ್ನ, ವಜ್ರ ಹಾಗೂ ಪ್ಲಾಟಿನಂ ನಂತಹ ಬೆಲೆ ಬಾಳುವ ಲೋಹಗಳನ್ನು ಸಾಗಿಸುತ್ತಿದ್ದ ವಿಮಾನವೊಂದರ ಬಾಗಿಲು ಟೇಕಾಫ್ ವೇಳೆ ಆಕಸ್ಮಿಕವಾಗಿ ತೆರೆದುಕೊಂಡ ಕಾರಣ ರನ್ ವೇ ತುಂಬೆಲ್ಲಾ ಚಿನ್ನ, ವಜ್ರ ಹಾಗೂ ಪ್ಲಾಟಿನಂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಅಂದಾಜು ಮೂರೂವರೆ ಟನ್ ಚಿನ್ನ ಹಾಗೂ ಇತರೆ ಬೆಲೆ ಬಾಳುವ ಲೋಹ ಚೆಲ್ಲಾಡಿದೆ ಎನ್ನಲಾಗಿದ್ದು, ತಕ್ಷಣವೇ ಸೂಕ್ತ ಕ್ರಮ ಕೈಗೊಂಡ ಭದ್ರತಾ ಸಿಬ್ಬಂದಿ ಇವುಗಳನ್ನು ಜೋಪಾನವಾಗಿ ಸಂಗ್ರಹಿಸಿದ್ದಾರೆ. ವಿಮಾನದ ಬಾಗಿಲನ್ನು ಸಮರ್ಪಕವಾಗಿ ಹಾಕಿಕೊಳ್ಳಲು ಲೋಪವೆಸಗಿದ ಸಿಬ್ಬಂದಿಗಳ ಕುರಿತು ಈಗ ತನಿಖೆ ನಡೆಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...