alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಉಗ್ರ ಹಫೀಜ್ ಸಯೀದ್ ಕುರಿತ ಬೆಚ್ಚಿಬೀಳಿಸುವ ವಿವರ

2008ರ ಮುಂಬೈ ದಾಳಿಯ ರೂವಾರಿ, ಉಗ್ರ ಹಫೀಜ್ ಸಯೀದ್ ನನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಕೋರ್ಟ್ ಆದೇಶ ನೀಡಿದೆ. ಈ ಮೂಲಕ ಉಗ್ರರಿಗೆ ರಕ್ಷಣೆ ನೀಡ್ತಿದೆ ನಮ್ಮ ಶತ್ರುರಾಷ್ಟ್ರ. ಲಷ್ಕರ್ ಇ ತೊಯ್ಬಾದ ಹಫೀಜ್ ಸಯೀದ್ ಸಾಮಾನ್ಯ ಆಸಾಮಿಯೇನಲ್ಲ.

ಮುಂಬೈನಲ್ಲಿ 166 ಮಂದಿ ಅಮಾಯಕರ ನೆತ್ತರು ಹೀರಿದ್ದ ಪಾಪಿ. 1990ರಲ್ಲೇ ಅಮೆರಿಕ ಅವನನ್ನು ಭಯೋತ್ಪಾದಕನೆಂದು ಕರೆದಿತ್ತು. ಹಫೀಜ್ ಸಯೀದ್ ತಲೆ ತಂದುಕೊಟ್ಟವರಿಗೆ 10 ಮಿಲಿಯನ್ ಡಾಲರ್ ಬಹುಮಾನ ಕೊಡುವುದಾಗಿ ಘೋಷಿಸಿತ್ತು. ಆದ್ರೂ ಹತ್ತಾರು ವರ್ಷ ಆತ ಪಾಕಿಸ್ತಾನದಲ್ಲಿ ಆರಾಮಾಗಿ ಓಡಾಡಿಕೊಂಡಿದ್ದ. ಕಳೆದ ಜನವರಿಯಲ್ಲಿ ಅವನನ್ನು ಗೃಹ ಬಂಧನದಲ್ಲಿಡಲಾಗಿತ್ತು.

ಹಫೀಜ್ ಸಹೀದ್ ಪಾಕಿಸ್ತಾನಿ ಪಂಜಾಬಿ ಕುಟುಂಬದಲ್ಲಿ ಜನಿಸಿದ್ದ. ಅವನ ಮನೆಯಲ್ಲಿ 36 ಸದಸ್ಯರಿದ್ದರಂತೆ, ಭಾರತ- ಪಾಕಿಸ್ತಾನ ಇಬ್ಭಾಗವಾದಾಗ ಶಿಮ್ಲಾದಿಂದ ಲಾಹೋರ್ ಗೆ ಗುಳೆ ಹೋಗಿದ್ದರು. ಪಾಕಿಸ್ತಾನದಲ್ಲಿ ಆಡಳಿತ ನಡೆಸಿದ್ದ ಜನರಲ್ ಮುಹಮ್ಮದ್ ಜಿಯಾ ಉಲ್ ಹಕ್, ಹಫೀಜ್ ಸಯೀದ್ ನನ್ನು ಕೌನ್ಸಿಲ್ ಆನ್ ಇಸ್ಲಾಮಿಕ್ ಐಡಿಯಾಲಜಿಗೆ ನೇಮಕ ಮಾಡಿದ್ದ. ನಂತರ ಲಾಹೋರ್ ವಿವಿಯಲ್ಲಿ ಶಿಕ್ಷಕನಾಗಿಯೂ ಹಫೀಜ್ ಕೆಲಸ ಮಾಡಿದ್ದಾನೆ.

ಭಯೋತ್ಪಾದನೆಯ ತರಬೇತಿಗಾಗಿ ಈತ ಅಫ್ಘಾನಿಸ್ತಾನಕ್ಕೂ ತೆರಳಿದ್ದ ಅಂತಾ ಹೇಳಲಾಗುತ್ತದೆ. ಅಲ್ಲಿ ಬಿನ್ ಲಾಡೆನ್ ನ ಮೆಂಟರ್ ಆಗಿದ್ದ ಅಬ್ದುಲ್ಲಾ ಅಜಮ್ ನ ಪರಿಚಯವಾಗಿತ್ತು. 2005ರಲ್ಲಿ ಎಲ್ ಇ ಟಿಯಲ್ಲಿದ್ದ ಪದವೀಧರರನ್ನೆಲ್ಲ ಹೋರಾಟಕ್ಕಿಳಿಸಿದ್ದ. ಇರಾಕ್ ನೊಳಕ್ಕೂ ಉಗ್ರರನ್ನು ಛೂ ಬಿಟ್ಟಿದ್ದ. 2006ರಲ್ಲಿ ಉಗ್ರರಿಗೆ ತರಬೇತಿ ಕೊಡಲು ಕ್ಯಾಂಪ್ ಶುರುಮಾಡಿದ್ದ.

1993ರ ನಂತರ ಹಫೀಜ್ ಸಯೀದ್ ನೇತೃತ್ವದಲ್ಲಿ ಪಾಕಿಸ್ತಾನ ಭಾರತದ ಮೇಲೆ ಹಲವು ಬಾರಿ ಭಯೋತ್ಪಾದಕ ದಾಳಿ ನಡೆಸಿದೆ. 2001ರ ಸಂಸತ್ ಮೇಲಿನ ದಾಳಿ, 2006ರ ಮುಂಬೈ ದಾಳಿ, 2005ರಲ್ಲಿ ದೆಹಲಿಯಲ್ಲಿ ನಡೆದ ವಿಧ್ವಂಸಕ ಕೃತ್ಯ, ಅದೇ ವರ್ಷ ಡಿಸೆಂಬರ್ ನಲ್ಲಿ ಬೆಂಗಳೂರಲ್ಲಿ ನಡೆದ ದಾಳಿ ಎಲ್ಲದರಲ್ಲೂ ಎಲ್ ಇ ಟಿ ಕೈವಾಡವಿದೆ ಅನ್ನೋದಕ್ಕೆ ಪುರಾವೆಗಳೇ ಬೇಕಾಗಿಲ್ಲ.

2008ರಲ್ಲಿ ಅಮೆರಿಕ, ಹಫೀಜ್ ಸಯೀದ್ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿತ್ತು. ಹಲವು ಬಾರಿ ಪಾಕಿಸ್ತಾನ ಈತನ ಬಂಧನದ ನಾಟಕವಾಡಿ ಮತ್ತೆ ಬಿಡುಗಡೆ ಮಾಡಿದೆ. ಗಲ್ಫ್ ರಾಷ್ಟ್ರಗಳು ಮತ್ತು ಬ್ರಿಟನ್ ನ ಇಸ್ಲಾಮಿಕ್ ಎನ್ ಜಿ ಓ ಗಳಿಂದ ಹಣದ ನೆರವು ಪಡೆದು ಸಹೀದ್ ಉಗ್ರ ಸಂಘಟನೆಯನ್ನು ಬೆಳೆಸಿದ್ದಾನೆ.

ಅಷ್ಟೇ ಅಲ್ಲ ಐ ಎಸ್ ಐ ಹಾಗೂ ಸೌದಿ ಅರೇಬಿಯಾ ಕೂಡ ಲಷ್ಕರ್ ಇ ತೊಯ್ಬಾಗೆ ಸಹಕರಿಸುತ್ತಲೇ ಇವೆ. ಜಮಾತ್ ಉದ್ ದವಾ ಸಂಘಟನೆಯ ಮುಖೇನ ಎಲ್ ಇ ಟಿ ತನ್ನ ಕೆಲಸಗಳನ್ನು ಸಾಧಿಸಿಕೊಳ್ಳುತ್ತದೆ. ಪಾಕಿಸ್ತಾನ 2015ರಲ್ಲಿ ಜೆಯುಡಿಯನ್ನು ವಾಚ್ ಲಿಸ್ಟ್ ನಲ್ಲೇನೋ ಇಟ್ಟಿತ್ತು, ಆದ್ರೆ ಸಂಘಟನೆಯನ್ನು ನಿಷೇಧಿಸಿಲ್ಲ.

ಫಲಾಹ್ ಇ ಇನ್ಸಾನಿಯತ್ ಎಂಬ ಸಂಘಟನೆ ಜೊತೆಗೂ ಸಯೀದ್ ನಂಟು ಹೊಂದಿದ್ದಾನೆ. ಈ ಸಂಘಟನೆಯನ್ನು ಅಮೆರಿಕ ಕಪ್ಪು ಪಟ್ಟಿಗೆ ಸೇರಿಸಿದೆ. ಭಾರತೀಯ ಸೇನೆ ಮೇಲೆ ದಾಳಿ ಮಾಡಿದ ಪಾಕಿಸ್ತಾನಿ ಮುಜಾಹಿದ್ದೀನ್ ನ ನಾಲ್ವರನ್ನು ಸಯೀದ್ ಕೊಂಡಾಡಿದ್ದ. ಅದನ್ನು ಸರ್ಜಿಕಲ್ ಸ್ಟ್ರೈಕ್ ಅಂತಾ ಬಣ್ಣಿಸಿದ್ದ. ಹಫೀಜ್ ಸಯೀದ್ ಜಾಗತಿಕ ಭಯೋತ್ಪಾದಕ ಅನ್ನೋದಂತೂ ಶತಃಸಿದ್ಧ. ಆದ್ರೂ ಪಾಕಿಸ್ತಾನ ಮಾತ್ರ ಅವನನ್ನು ಬಂಧನದಲ್ಲಿಡದೇ ಮತ್ತಷ್ಟು ಹೇಯ ಕೃತ್ಯಗಳಿಗೆ ಸಂಚು ಮಾಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...