alex Certify
ಕನ್ನಡ ದುನಿಯಾ       Mobile App
       

Kannada Duniya

ಏಡ್ಸ್ ಖಾಯಿಲೆಗೇ ಸೆಡ್ಡು ಹೊಡೆದಿದ್ದಾಳೆ ಈ ಬಾಲೆ

hiv

ಇತ್ತೀಚೆಗಷ್ಟೆ ಪ್ಯಾರಿಸ್ ನಲ್ಲಿ ಇಂಟರ್ ನ್ಯಾಶನಲ್ ಏಡ್ಸ್ ಸೊಸೈಟಿಯ ಕಾನ್ಫರೆನ್ಸ್ ಹಮ್ಮಿಕೊಳ್ಳಲಾಗಿತ್ತು. ಈ ಕಾನ್ಫರೆನ್ಸ್ ನಲ್ಲಿ ಆಶ್ಚರ್ಯಕರ ಸಂಗತಿಯೊಂದು ಬಹಿರಂಗವಾಗಿದೆ. ಎಚ್ ಐ ವಿಯಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕಾದ ಬಾಲಕಿಯೊಬ್ಬಳು 9 ವರ್ಷಗಳಿಂದ ಯಾವುದೇ ಔಷಧವನ್ನೇ ತೆಗೆದುಕೊಳ್ಳದೇ ಬದುಕಿದ್ದಾಳೆ.

ಹುಟ್ಟುವಾಗ್ಲೇ ಆಕೆಗೆ ಎಚ್ ಐ ವಿ ಸೋಂಕಿತ್ತು. ಆಕೆಗೆ ಒಂದು ವರ್ಷ ತುಂಬುವವರೆಗೆ ಸುಮಾರು 10 ತಿಂಗಳುಗಳ ಕಾಲ ಕೋಕ್ಟೆಲ್ ಎಂಬ ಮಾತ್ರೆಯನ್ನು ಕೊಡಲಾಗುತ್ತಿತ್ತು. ಅದಾದ್ಮೇಲೆ ಯಾವ ಔಷಧವನ್ನೂ ನೀಡಿಲ್ಲ. ಯಾವುದೇ ಮದ್ದು ಸೇವಿಸದೇ ಬಾಲಕಿ ಆರಾಮಾಗಿದ್ದಾಳೆ. ಒಂದರ್ಥದಲ್ಲಿ ಏಡ್ಸ್ ಖಾಯಿಲೆಗೇ ಸೆಡ್ಡು ಹೊಡೆದಿದ್ದಾಳೆ.

ಎಚ್ ಐ ವಿ ಪೀಡಿತ ಮಕ್ಕಳಿಗೆ ಆರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡಿದ್ರೆ, ಆ ಖಾಯಿಲೆಯಿಂದ ಅವರನ್ನು ಪಾರು ಮಾಡಬಹುದೇನೋ ಅನ್ನೋ ಆಶಾವಾದ ವೈದ್ಯರಲ್ಲಿ ಮೂಡಿದೆ. ಎಚ್ ಐ ವಿ ಗೆ ನೀಡುವ ಚಿಕಿತ್ಸೆಯಿಂದ ವೈರಸ್ ಕಡಿಮೆಯಾಗುತ್ತದೆ, ಆದ್ರೆ ಚಿಕಿತ್ಸೆ ನಂತರವೂ ಅವು ದೇಹದಲ್ಲಿ ಉಳಿದು ಬಿಡುತ್ತವೆ.

ಆದ್ರೆ ಅವು ಚಿಕಿತ್ಸೆ ಬಳಿಕ ದುರ್ಬಲವಾಗಿರುವುದರಿಂದ ಇತರರಿಗೆ ಸೋಂಕು ತಗುಲುವುದಿಲ್ಲ. ವೈರಸ್ ಗಳು ಮನುಷ್ಯರ ಜೀವಕೋಶದಲ್ಲಿ ಅಡಗಿಕೊಂಡಿರುತ್ತವೆ. ಆವರ ಜೀವಕ್ಕೇ ಮಾರಕವಾಗಿಬಿಡುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...