alex Certify
ಕನ್ನಡ ದುನಿಯಾ       Mobile App
       

Kannada Duniya

ನೀರಿಲ್ಲದೆ ಪಾಸ್ತಾ ತಯಾರಿಸಲು ಹೋಗಿ ಯಡವಟ್ಟು ಮಾಡಿಕೊಂಡ್ಲು

ಅಡುಗೆಯಲ್ಲಿ ಪ್ರಯೋಗ ಮಾಡೋದು ಸಾಮಾನ್ಯ ವಿಷ್ಯ. ಆದ್ರೆ ಅಮೆರಿಕಾ ಹುಡುಗಿ ಇಟಲಿಯಲ್ಲಿ ಮಾಡಿದ ಅಡುಗೆ ಪ್ರಯೋಗ ದುಬಾರಿಯಾಗಿ ಪರಿಣಮಿಸಿದೆ. ನೀರಿಲ್ಲದೆ ಪಾಸ್ತಾ ಮಾಡಲು ಹೋಗಿ ಅಗ್ನಿ ಅನಾಹುತಕ್ಕೆ ಕಾರಣವಾಗಿದ್ದಾಳೆ.

ಮಾಧ್ಯಮಗಳ ವರದಿ ಪ್ರಕಾರ, 20 ವರ್ಷದ ಹುಡುಗಿ ಪಾಸ್ತಾ ಖರೀದಿ ಮಾಡಿದ್ದಾಳೆ. ನಂತ್ರ ಮನೆಗೆ ಬಂದು ಪಾಸ್ತಾವನ್ನು ಪಾತ್ರೆಗೆ ಹಾಕಿ ಗ್ಯಾಸ್ ಹಚ್ಚಿದ್ದಾಳೆ. ತಕ್ಷಣ ಪಾಸ್ತಾ ಪಾತ್ರೆಗೆ ಬೆಂಕಿ ಹತ್ತಿಕೊಂಡಿದೆ. ಮನೆಯ ಕೆಲ ಭಾಗಗಳೂ ಬೆಂಕಿಗೆ ಆಹುತಿಯಾಗಿವೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಪಾಸ್ತಾವನ್ನು ಹೇಗೆ ಮಾಡ್ತಾರೆ ಎಂಬುದು ವಿದ್ಯಾರ್ಥಿನಿಗೆ ಗೊತ್ತಿರಲಿಲ್ಲವಂತೆ. ಹಾಗಾಗಿ ನೀರು ಹಾಕದೆ ಪಾಸ್ತಾವನ್ನು ಒಲೆ ಮೇಲಿಟ್ಟಿದ್ದಾಳೆ. ಘಟನೆ ನಂತ್ರ ಪ್ರಸಿದ್ಧ ಬಾಣಸಿಗ ಫ್ಯಾಬಿಯೋ ಪಿಚಿ ವಿದ್ಯಾರ್ಥಿನಿಯನ್ನು ಇಟಾಲಿಯನ್ ಅಡುಗೆ ತರಗತಿಗೆ ಆಹ್ವಾನಿಸಿದ್ದಾರೆ. ಈ ವಿದ್ಯಾರ್ಥಿನಿ ನಮ್ಮ ರೆಸ್ಟೋರೆಂಟ್ ಗೆ ಬಂದು ಎರಡು ಪ್ರಸಿದ್ಧ ಕುಕ್ ಮಾಡಿರುವ ಅಡುಗೆ ತಿನ್ನುತ್ತಾಳೆ. ಜೊತೆಗೆ ಹೇಗೆ ಮಾಡುವುದು ಎಂಬುದನ್ನು ಕಲಿಯುತ್ತಾಳೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...