alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಲೆವರಿ ಬಾಯ್ ನಿಂದ ಗೊತ್ತಾಯ್ತು ಬಾಯ್ ಫ್ರೆಂಡ್ ಮೋಸ

ಪ್ರತಿಯೊಬ್ಬರು ಸಂಬಂಧದಲ್ಲಿ ಸಣ್ಣ ಸಣ್ಣ ಖುಷಿಯನ್ನು ಹುಡುಕುತ್ತಿರುತ್ತೇವೆ. ಆದ್ರೆ ಕೆಲವೊಮ್ಮೆ ನಾವು ಅಂದುಕೊಂಡಿದ್ದಕ್ಕೆ ತದ್ವಿರುದ್ಧವಾದ ಘಟನೆ ನಡೆಯುತ್ತದೆ. ಇದಕ್ಕೆ ಅಮೆರಿಕಾದ ಕಯ್ಲಾ ಉತ್ತಮ ನಿದರ್ಶನ.

ಕಯ್ಲಾ ಅಮೆರಿಕಾದ ಸ್ಯಾಂಡ್ವಿಚ್ ರೆಸ್ಟೋರೆಂಟ್ ಜಿಮ್ಮಿ ಜಾನ್ ಗೆ ಕೃತಜ್ಞತೆ ಸಲ್ಲಿಸಿದ್ದಾಳೆ. ಕಯ್ಲಾ ಅನೇಕ ದಿನಗಳಿಂದ ಒಬ್ಬನನ್ನು ಪ್ರೀತಿ ಮಾಡ್ತಿದ್ದಳು. ಆತನಿಗೆ ಸರ್ಪ್ರೈಸ್ ನೀಡಿ ಆತನನ್ನು ಖುಷಿಗೊಳಿಸಲು ಮುಂದಾದ್ಲು. ಆದ್ರೆ ಈ ಸರ್ಪ್ರೈಸ್ ಇಷ್ಟು ಆಘಾತ ನೀಡುತ್ತೆ ಎಂಬುದು ಕಯ್ಲಾಗೆ ತಿಳಿದಿರಲಿಲ್ಲ.

ಜಿಮ್ಮಿ ಜಾನ್ ಗೆ ಕರೆ ಮಾಡಿದ ಕಯ್ಲಾ ನಾನು ಊರಲ್ಲಿಲ್ಲ. ಹಾಗಾಗಿ ನನ್ನ ಬಾಯ್ ಫ್ರೆಂಡ್ ಮನೆಗೆ ಸ್ಯಾಂಡ್ವಿಚ್ ನೀಡಿ ಎಂದಿದ್ದಳು. ಆತನ ಅಡ್ರೆಸ್ ನೀಡಿದ್ದಳು. ಈ ಮಧ್ಯೆ ಕಯ್ಲಾ ಬಾಯ್ ಫ್ರೆಂಡ್ ನಾನು ನಿದ್ರೆ ಮಾಡುತ್ತೇನೆಂದು ಮೆಸ್ಸೇಜ್ ಕಳುಹಿಸಿದ್ದ. ಇದನ್ನು ಓದಿದ ಕಯ್ಲಾ ನಿನಗೆ ಸರ್ಪ್ರೈಸ್ ಬರ್ತಿದೆ ಎಂದು ಮೆಸ್ಸೇಜ್ ಮಾಡಿದ್ದಳು. ಕೆಲ ಸಮಯದ ನಂತ್ರ ಆಕೆ ಬಾಯ್ ಫ್ರೆಂಡ್ ಥ್ಯಾಂಕ್ಸ್ ಮೆಸ್ಸೇಜ್ ಕಳುಹಿಸಿದ್ದ. ಇದ್ರಿಂದ ಕಯ್ಲಾ ಖುಷಿಯಾಗಿದ್ದಳು.

ಕೆಲವೇ ಗಂಟೆಗಳಲ್ಲಿ ಕಯ್ಲಾಗೆ ಜಿಮ್ಮಿ ಜಾನ್ ಡಿಲೆವರಿ ಬಾಯ್ ನಿಂದ ಕರೆ ಬಂದಿದೆ. ಆತ ಕಯ್ಲಾಗೆ ಸತ್ಯವೊಂದನ್ನು ಹೇಳಿದ್ದಾನೆ. ಕಯ್ಲಾ ಬಾಯ್ ಫ್ರೆಂಡ್ ಬೇರೆ ಹುಡುಗಿ ಜೊತೆ ಮಲಗಿದ್ದ ಎಂದಿದ್ದಾನೆ. ಇಷ್ಟೇ ಅಲ್ಲ ಕಯ್ಲಾ ಕೇಳಿದ ಎಲ್ಲ ಪ್ರಶ್ನೆಗೆ ಉತ್ತರ ನೀಡಿದ್ದಾನೆ. ಇದ್ರಿಂದ ಆಘಾತಗೊಂಡ ಕಯ್ಲಾ ಮೋಸ ಮಾಡಿದ ಬಾಯ್ ಫ್ರೆಂಡ್ ಗೆ ಗುಡ್ ಬಾಯ್ ಹೇಳಿದ್ದಾಳೆ. ಜೊತೆಗೆ ಟ್ವೀಟರ್ ನಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...