alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿಯ ರೂಲ್ಸ್ ಪಟ್ಟಿ ನೋಡಿ ಬೆಚ್ಚಿಬಿದ್ದ ಬಾಯ್ ಫ್ರೆಂಡ್

ಪ್ರೀತಿ ಪ್ರೇಮದಲ್ಲಿ ಕೆಲವೊಮ್ಮೆ ಅಲಿಖಿತ ನಿಯಮಗಳಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ತಾನು ಪ್ರೀತಿಸಬೇಕೆಂದರೆ ಬರೋಬ್ಬರಿ 22 ಲಿಖಿತ ನಿಯಮಗಳನ್ನು ಹಾಕಿ ಯುವಕನಿಗೆ ನೀಡಿರುವ ಪತ್ರ ಇದೀಗ ವೈರಲ್ ಆಗಿದೆ.

ತನ್ನ ಪ್ರಿಯತಮನನ್ನು ಸಂಪೂರ್ಣ ಹತೋಟಿಗೆ ತಗೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ 22 ನಿಯಮಗಳನ್ನು ಹಾಕಿರುವ ಈ ಯುವತಿಯ ಪತ್ರವನ್ನು ಟ್ವೀಟರ್ ಗೆ ಅಪ್ಲೋಡ್ ಮಾಡುತ್ತಿದ್ದಂತೆ ಭಾರಿ ವೈರಲ್ ಆಗಿದೆ. ಆದ್ದರಿಂದ ಕೂಡಲೇ ಖಾತೆಯಿಂದ ಈ ಫೋಟೊ ಡಿಲಿಟ್ ಮಾಡಿದ್ದರೂ, ಫೋಟೋ ಡೌನ್ ಲೋಡ್ ಮಾಡಿಕೊಂಡಿರುವುದರಿಂದ, ಬೇರೆ ಖಾತೆಯಿಂದ ವೈರಲ್ ಆಗಿದೆ.

22 ನಿಯಮದ ಪಟ್ಟಿಯಲ್ಲಿ ಪ್ರಮುಖವಾಗಿ, ಇನ್ನೊಬ್ಬ ಯುವತಿಯೊಂದಿಗೆ ಮಾತನಾಡುವಂತಿಲ್ಲ. ಬೇರೆ ಹುಡುಗಿಯ ನಂಬರ್ ಇಟ್ಟುಕೊಳ್ಳುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವಂತಿಲ್ಲ. ಸ್ನೇಹಿತರೊಂದಿಗೆ ವಾರಕ್ಕೆ ಎರಡು ಬಾರಿಗಿಂತ ಹೆಚ್ಚು ಬಾರಿ ಹೊರ ಹೋಗುವಂತಿಲ್ಲ ಎಂಬುದು ಸೇರಿದಂತೆ ಇನ್ನು ಅನೇಕ ಷರತ್ತುಗಳನ್ನು ವಿಧಿಸಿದ್ದಾಳೆ.

ಯುವತಿಯ ಷರತ್ತಿಗೆ ದಂಗಾಗಿರುವ ನೆಟ್ಟಿಗರು, ಇನ್ನೊಬ್ಬ ಹುಡುಗಿಯನ್ನು ಹುಡುಕು ಎಂದು ಸಲಹೆ ನೀಡಿದರೆ, ಇನ್ನು ಕೆಲವರು ಕ್ರೇಜಿ ಐಡಿಯಾವೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...