alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಮಗಳ ಜೊತೆ 16ಕ್ಕೂ ಹೆಚ್ಚು ಬಾರಿ ಸಂಬಂಧ ಬೆಳೆಸಿದ ತಂದೆ

ಅಪ್ರಾಪ್ತೆಗೆ ತಂದೆಯೇ ಶತ್ರುವಾಗಿದ್ದಾನೆ. 16ಕ್ಕೂ ಹೆಚ್ಚು ಬಾರಿ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಗುವಿನ ಮಾನಸಿಕ ಸ್ಥಿತಿ ಹದಗೆಟ್ಟಿದ್ದು, ಆಕೆ ಆಘಾತದಿಂದ ಹೊರ ಬರಲು ಸಾಧ್ಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. ಆರೋಪಿ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕನಿಷ್ಠವೆಂದ್ರೂ 16 ವರ್ಷಗಳ ಕಾಲ ಆರೋಪಿ ಜೈಲಿನಲ್ಲಿ ಕಳೆಯಬೇಕು.

ಘಟನೆ ಯುಕೆಯಲ್ಲಿ ನಡೆದಿದೆ. ಬಾಲಕಿ ರಕ್ಷಣೆ ಹಿನ್ನೆಲೆಯಲ್ಲಿ ಕೋರ್ಟ್ ಆರೋಪಿ ಹೆಸರನ್ನು ಬಹಿರಂಗಪಡಿಸಿಲ್ಲ. ತಂದೆ-ತಾಯಿ ಮಗುವನ್ನು ಕೋಣೆಯಲ್ಲಿ ಬಂಧಿಸಿಟ್ಟಿದ್ದರು. ಬಾಲಕಿಯನ್ನು ಹೊರಗೆ ಆಡಲು ಬಿಡ್ತಿರಲಿಲ್ಲ. ಶಾಲೆಗೂ ಕಳುಹಿಸುತ್ತಿರಲಿಲ್ಲ. ಪತ್ನಿಯನ್ನೂ ಬಂಧಿಯಾಗಿಟ್ಟುಕೊಂಡಿದ್ದ ಆರೋಪಿ ಪತ್ನಿಯನ್ನು ಶಾಪಿಂಗ್ ಗೆ ಕಳಿಸುತ್ತಿರಲಿಲ್ಲವಂತೆ.

ಈ ಮಧ್ಯೆ ಪತಿ-ಪತ್ನಿ ಸಂಬಂಧದಲ್ಲಿ ಬಿರುಕು ಮೂಡಿದೆ. ಹಾಗಾಗಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮನೆ ಮೇಲೆ ದಾಳಿ ಮಾಡಿದ ವೇಳೆ ಸೆಕ್ಸ್ ಗೆ ಸಂಬಂಧಿಸಿದ ಅನೇಕ ವಸ್ತುಗಳು ಸಿಕ್ಕಿವೆ. ಪತ್ನಿ ಮೊಬೈಲ್ ನಲ್ಲಿ ಮಗು ಮೇಲೆ ಅತ್ಯಾಚಾರ ನಡೆದ ಅನೇಕ ಫೋಟೋಗಳು ಸಿಕ್ಕಿವೆ. ಇಷ್ಟೇ ಅಲ್ಲ ಆರೋಪಿ ಮೊದಲ ಪತ್ನಿ ಮಗಳ ಮೇಲೂ ಅತ್ಯಾಚಾರ ನಡೆಸಿದ್ದನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...