alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರ ಪ್ರೀತಿ ಮಾಡಿದ ತಪ್ಪಿಗೆ ಸಹೋದರಿಗೆ ನಿರ್ವಸ್ತ್ರದ ಶಿಕ್ಷೆ

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಎಂಬ ನಾಣ್ಣುಡಿಯಿದೆ. ಇದು ಪಾಕಿಸ್ತಾನಕ್ಕೆ ಸರಿ ಹೊಂದುತ್ತೆ. ಪುರುಷರು ತಪ್ಪು ಮಾಡಿದ್ರೆ ಇಲ್ಲಿನ ಮಹಿಳೆಯರು ಶಿಕ್ಷೆ ಅನುಭವಿಸಬೇಕು. ಪಾಪಿಗಳ ದೇಶ ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಈವರೆಗೂ ಸ್ವಾತಂತ್ರ್ಯ ಸಿಕ್ಕಿಲ್ಲ.

ಉತ್ತರ-ಪಶ್ಚಿಮ ಪಾಕಿಸ್ತಾನದಲ್ಲಿ ಪೀಡಿತ ಯುವತಿಯ ಸಹೋದರ ಪಕ್ಕದ ಮನೆ ಹುಡುಗಿಯನ್ನು ಪ್ರೀತಿ ಮಾಡಿದ್ದಾನೆ. ಇದಕ್ಕೆ ಆ ಹುಡುಗಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದಲ್ಲದೆ ಹುಡುಗನ ಸಹೋದರಿಗೆ ಶಿಕ್ಷೆ ನೀಡಿದ್ದಾರೆ. ಆತನ ಸಹೋದರಿಯನ್ನು ಮನೆಯಿಂದ ಕರೆತಂದು ಬಟ್ಟೆ ಬಿಚ್ಚಿದ್ದಲ್ಲದೆ ಇಡೀ ಊರು ಸುತ್ತು ಹಾಕುವ ಶಿಕ್ಷೆ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇಬ್ಬರು ಮುಖ್ಯ ಆರೋಪಿಗಳು ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಕಾರ್ಯತಂತ್ರ ರೂಪಿಸಿದ್ದಾರೆ. ಪಾಕಿಸ್ತಾನದಲ್ಲಿ ಪ್ರತಿ ವರ್ಷ ಪ್ರೀತಿ ಮಾಡಿ ಮದುವೆಯಾಗುವ ಸಾವಿರಕ್ಕೂ ಹೆಚ್ಚು ಹುಡುಗಿಯರನ್ನು ಹತ್ಯೆ ಮಾಡಲಾಗುತ್ತದೆ. ಪಾಕಿಸ್ತಾನ ಸರ್ಕಾರ ಹಾಗೂ ಪೊಲೀಸರಿಗೆ ಇದು ಗೊತ್ತಿದ್ದೂ ಸುಮ್ಮನಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...