alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತೆ ತಂದೆ ಮೇಲೆ ಪ್ರೀತಿ ಚಿಗುರಿದ ಹುಡುಗಿ ಮಾಡಿದ್ದೇನು?

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಪ್ರೀತಿಯಲ್ಲಿ ಬಿದ್ದವರು ದೇಶ ಮರೆಯುತ್ತಾರೆ. ಇದಕ್ಕೆ ಅಮೆರಿಕಾದ ಒಂದು ಜೋಡಿ ಉತ್ತಮ ನಿದರ್ಶನ. 27 ವರ್ಷದ ಟೇಲರ್ ಲೆಹ್ಮನ್ ತನಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ಕೆರಿನ್ ನನ್ನು ಮದುವೆಯಾಗಿದ್ದಾಳೆ.

ಕೆರಿನ್ ಗೆ 54 ವರ್ಷ. ಕೆರಿನ್, ಲೆಹ್ಮನ್ ಳ ಸ್ನೇಹಿತೆ ತಂದೆ. ಲೆಹ್ಮನ್ ಪ್ರೀತಿ ವಿಷ್ಯ ಗೊತ್ತಾಗ್ತಿದ್ದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ ನನ್ನ ತಂದೆ ವಯಸ್ಸಿನ ವ್ಯಕ್ತಿಯನ್ನು ತಾನು ಪ್ರೀತಿ ಮಾಡ್ತಿದ್ದೇನೆಂಬುದನ್ನು ಲೆಹ್ಮನ್ ಒಪ್ಪಿಕೊಂಡಿದ್ದಾಳೆ. ಆರಂಭದಲ್ಲಿ ನನಗೆ ಹಿಂಜರಿಕೆಯಾಗ್ತಿತ್ತು. ಆದ್ರೆ ಕಾಲ ಕಳೆದಂತೆ ಪರಿಸ್ಥಿತಿಗೆ ಹೊಂದಿಕೊಂಡೆ ಎಂದಿದ್ದಾಳೆ.

ಐದು ವರ್ಷಗಳ ಕಾಲ ಸಂಬಂಧದಲ್ಲಿದ್ದ ಜೋಡಿ ನಂತ್ರ ಮದುವೆಯಾಗಿದ್ದಾರೆ. ಇಬ್ಬರ ಆಸಕ್ತಿ, ಹವ್ಯಾಸ ಎಲ್ಲ ಒಂದೇ ರೀತಿಯಿದೆ. ನನಗಿಂತ ದೊಡ್ಡ ವಯಸ್ಸಿನವರ ಮೇಲೆ ನಾನು ಸದಾ ಆಕರ್ಷಿತನಾಗ್ತಿದ್ದೆ. ಕೆರಿನ್ ತುಂಬಾ ಸುಂದರವಾಗಿದ್ದಾರೆ. ಮೊದಲ ಭೇಟಿಯಲ್ಲಿಯೇ ಅವ್ರ ಮೇಲೆ ನನಗೆ ಪ್ರೀತಿ ಚಿಗುರಿತ್ತು ಎನ್ನುತ್ತಾಳೆ ಲೆಹ್ಮನ್. ತಂದೆ ಹಾಗೂ ಸ್ನೇಹಿತೆ ಮಧ್ಯೆ ಚಿಗುರಿದ ಪ್ರೀತಿಯನ್ನು ಎಂದೂ ಸ್ನೇಹಿತೆ ವಿರೋಧ ಮಾಡಿಲ್ಲವಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...