alex Certify
ಕನ್ನಡ ದುನಿಯಾ       Mobile App
       

Kannada Duniya

15ನೇ ವಯಸ್ಸಿನಲ್ಲಿಯೇ ತಾಯಿಯಾಗಿದ್ದ ಈಕೆಗೆ 8 ಮಕ್ಕಳು

ಲಿವ್ ಇನ್ ಪದ್ಧತಿ ಭಾರತದಲ್ಲಿ ನಿಧಾನವಾಗಿ ಹೆಚ್ಚಾಗ್ತಿದೆ. ಆದ್ರೆ ಮದುವೆಗೂ ಮೊದಲು ತಾಯಿಯಾದ್ರೆ ಈಗ್ಲೂ ಸಮಾಜ ಅವ್ರನ್ನು ಬೇರೆ ದೃಷ್ಟಿಯಲ್ಲಿ ನೋಡುತ್ತದೆ. ಅದ್ರಲ್ಲೂ ಅಪ್ರಾಪ್ತ ಹುಡುಗಿಯರು ತಾಯಿಯಾಗೋದು ಬಹುದೊಡ್ಡ ವಿಷ್ಯ. ಕೇವಲ ಭಾರತದಲ್ಲೊಂದೇ ಅಲ್ಲ ವಿದೇಶದಲ್ಲಿ ಕೂಡ ಅಪ್ರಾಪ್ತೆ ತಾಯಿಯಾಗೋದನ್ನು ಎಲ್ಲರೂ ಒಪ್ಪೊಂದಿಲ್ಲ.

ಮೆಲ್ಬೋರ್ನ್ ನಲ್ಲಿ ವಾಸವಾಗಿರುವ ಶರೋನ್ ಜಬೊರ್ ತನ್ನ ಕಥೆಯನ್ನು ಜನರೊಂದಿಗೆ ಹಂಚಿಕೊಂಡಿದ್ದಾಳೆ. ಆಕೆ 15ನೇ ವಯಸ್ಸಿನಲ್ಲಿಯೇ ಅಮ್ಮನಾಗಿದ್ದಾಳೆ. ಈಗ ಶರೋನ್ ಗೆ 34 ವರ್ಷ. 1999 ರಲ್ಲಿ ಶರೋನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಸ್ಕೂಲಿಗೆ ಹೋಗ್ತಿರುವಾಗಲೇ ಶರೋನ್ ಮಗುವಿಗೆ ಜನ್ಮ ನೀಡಿದ್ದು ಎಲ್ಲರ ವಿರೋಧಕ್ಕೆ ಕಾರಣವಾಗಿತ್ತು.

ಆದ್ರೆ ಶರೋನ್ ಪ್ರೇಮಿ ರೆಮ್ಸಿ ಸಂಪೂರ್ಣ ಬೆಂಬಲ ನೀಡಿದ್ದನಂತೆ. 2011ರಲ್ಲಿ ಇಬ್ಬರು ಮದುವೆಯಾಗಿದ್ದಾರೆ. 1999ರಿಂದ 2011ರವರೆಗೆ ಶರೋನ್ 6 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಮದುವೆಯಾದ್ಮೇಲೆ 2 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈಗ ಶರೋನಿಗೆ 8 ಮಕ್ಕಳು.

ಚಿಕ್ಕ ವಯಸ್ಸಿನಲ್ಲಿ ತಾಯಿಯಾದ್ರೆ ಕಷ್ಟ ಎಂಬ ಮಾತನ್ನು ಎಲ್ಲರೂ ಹೇಳ್ತಾರೆ. ಆದ್ರೆ ನನಗೆ ಕಷ್ಟವಾಗಲಿಲ್ಲ ಎನ್ನುತ್ತಾಳೆ ಶರೋನ್. ಮನಸ್ಸಿಟ್ಟು ಕೆಲಸ ಮಾಡಿದ್ರೆ ಯಶಸ್ಸು ಸಾಧ್ಯ ಎನ್ನುವ ಈಕೆ ಡಾಟಾ ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡ್ತಾಳೆ. ಹಾಗೆ ಆನ್ಲೈನ್ ವ್ಯಾಪಾರ ಮಾಡ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...