alex Certify
ಕನ್ನಡ ದುನಿಯಾ       Mobile App
       

Kannada Duniya

ಆಟವಾಡಲು ಬೋನಿನೊಳಕ್ಕಿಳಿದ ಬಾಲಕಿ ಮೇಲೆ ಸಿಂಹ ದಾಳಿ

ಸೌದಿ ಅರೇಬಿಯಾದಲ್ಲಿ ಸಿಂಹದ ಜೊತೆ ಆಟವಾಡಲು ಹೋಗಿ ಬಾಲಕಿಯೊಬ್ಬಳು ಅಪಾಯಕ್ಕೆ ಸಿಲುಕಿದ್ಲು. ಆದ್ರೆ ಅದೃಷ್ಟವಶಾತ್ ಪಾರಾಗಿ ಬಂದಿದ್ದಾಳೆ. 6 ತಿಂಗಳ ಪ್ರಾಯದ ಸಿಂಹವನ್ನು ಬೋನಿನಲ್ಲಿ ಇಡಲಾಗಿತ್ತು. ಒಂದಷ್ಟು ಮಕ್ಕಳು ಬೋನಿನೊಳಗೆ ಪ್ರವೇಶಿಸಿ, ಸಿಂಹದ ಜೊತೆಗೆ ಆಟವಾಡಲು ಆರಂಭಿಸಿದ್ದಾರೆ.

ಸಿಂಹದ ಟ್ರೈನರ್ ಕೂಡ ಜೊತೆಗಿದ್ದ. ಈ ವೇಳೆ ಬಾಲಕಿಯೊಬ್ಬಳನ್ನು ಸಿಂಹ ಅಡ್ಡಗಟ್ಟಿದೆ. ಆಕೆಯ ಮೇಲೆ ದಾಳಿ ಮಾಡಿದೆ. ತನ್ನ ಪಂಜಿನಿಂದ ಬಾಲಕಿ ತಲೆಯನ್ನು ಹಿಡಿದು ನೆಲಕ್ಕೆ ಅಪ್ಪಳಿಸಿದೆ. ಬಾಲಕಿ ಹೆದರಿ ಕೂಗಿಕೊಂಡಿದ್ದಾಳೆ.

ಕೂಡಲೇ ಉಳಿದವರೆಲ್ಲ ಸೇರಿ ಸಿಂಹವನ್ನು ಪಕ್ಕಕ್ಕೆ ಎಳೆದುಹಾಕಿದ್ರು. ಜೆಡ್ಡಾದಲ್ಲಿ ನಡೆದ ಉತ್ಸವದ ಹಿನ್ನೆಲೆಯಲ್ಲಿ ಮಕ್ಕಳ ಮನರಂಜಿಸಲು ಈ ಸಿಂಹವನ್ನು ತರಲಾಗಿತ್ತು. ಈ ಘಟನೆ ಬಳಿಕ ಸಿಂಹದ ತರಬೇತುದಾರ ಹಾಗೂ ಸಂಘಟಕರನ್ನು ವಶಕ್ಕೆ ಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...