alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಗೆ ಕಿಸ್ ಕೊಡುವಾಗ ಹೋಯ್ತು ಹುಡುಗಿಯ ಜೀವ

myrium

ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗ ಕಿಸ್. ಹಾಗಂತ ಕಿಸ್ ಕೊಡುವಾಗ ಎಚ್ಚರ ತಪ್ಪದಿರಿ. ಅದು ನಿಮ್ಮ ಪ್ರಾಣವನ್ನೇ ಪಡೆಯಬಹುದು. ಇಂತಹದ್ದೊಂದು ಘಟನೆ ಕೆನಡಾದ ಮಾಂಟ್ರಿಯಲ್ ನಲ್ಲಿ ನಡೆದಿದೆ. 20 ವರ್ಷದ ಮಿರಿಯಮ್  ಬಾಯ್ ಫ್ರೆಂಡ್ ಗೆ ಕೊಟ್ಟ ಕಿಸ್ ಆಕೆಯನ್ನೇ ಬಲಿ ಪಡೆದಿದೆ. ಇದಕ್ಕೆ ಕಾರಣವಾಗಿದ್ದು ಆಕೆಯ ಅಲರ್ಜಿ.

ಘಟನೆ ನಡೆದಿರುವುದು 2012ರಲ್ಲಿ. ಈಗ ಮಿರಿಯಮ್ ತಾಯಿ ಈ ವಿಷಯವನ್ನು ಹೇಳಿದ್ದಾಳೆ. ಅಲರ್ಜಿ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಜನರನ್ನು ಜಾಗೃತಗೊಳಿಸುತ್ತಿರುವ ಮಿರಿಯಮ್ ತಾಯಿ, ಮಗಳ ಸಾವಿನ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.

ಮಿರಿಯಮ್ ಪಾರ್ಟಿಯೊಂದಕ್ಕೆ ಹೋಗಿದ್ದಳಂತೆ. ಅಲ್ಲಿಂದ ಆಕೆ ಬಾಯ್ ಫ್ರೆಂಡ್ ಮನೆಗೆ ಹೋಗಿದ್ದಾಳೆ. ಬಾಯ್ ಫ್ರೆಂಡ್ ಕಡಲೆಕಾಯಿ ಬೆಣ್ಣೆಯ ಸ್ಯಾಂಡ್ವಿಚ್ ಸೇವಿಸಿದ್ದಾನೆ. ನಂತ್ರ ಬ್ರೆಷ್ ಕೂಡ ಮಾಡಿದ್ದನಂತೆ. ಆದ್ರೆ ಮಿರಿಯಮ್ ಗೆ ನಟ್ಸ್ ಅಲರ್ಜಿ ಇತ್ತಂತೆ.

ಕೆಲ ದಿನಗಳ ಹಿಂದಷ್ಟೆ ಗೆಳೆಯನ ಪರಿಚಯವಾಗಿದ್ದರಿಂದ ಈ ವಿಷಯವನ್ನು ಮಿರಿಯಮ್ ಇನ್ನೂ ಗೆಳೆಯನಿಗೆ ಹೇಳಿರಲಿಲ್ಲವಂತೆ. ಅಲರ್ಜಿ ಬಗ್ಗೆ ತಿಳಿಯದ ಗೆಳೆಯ ಕಿಸ್ ಕೊಟ್ಟಿದ್ದಾನೆ. ಕೆಲವೇ ಕ್ಷಣಗಳಲ್ಲಿ ಮಿರಿಯಮ್ ಗೆ ಸಮಸ್ಯೆ ಶುರುವಾಗಿದೆ. ಕರೆ ಮಾಡಿದ 8 ನಿಮಿಷಕ್ಕೆ ಅಂಬ್ಯುಲೆನ್ಸ್ ಬಂದಿದೆ. ವೈದ್ಯರು ಮಿರಿಯಮ್ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದ್ರೆ ಮಿರಿಯಮ್ ಉಳಿಯಲಿಲ್ಲ.

ಅಲರ್ಜಿ ಒಂದು ಭಯಾನಕ ಖಾಯಿಲೆಯಲ್ಲ ನಿಜ. ಆದ್ರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ತುರ್ತು ಚಿಕಿತ್ಸೆಗೆ ಬೇಕಾಗುವ ಮಾತ್ರೆ, ಔಷಧಿಗಳು ಸದಾ ನಿಮ್ಮ ಬಳಿ ಇರಲಿ. ನಿಮ್ಮ ಅಲರ್ಜಿ ಬಗ್ಗೆ ನಿಮ್ಮವರಿಗೆ ತಿಳಿದಿರಲಿ ಎನ್ನುತ್ತಾರೆ ಮಿರಿಯಮ್ ತಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...