alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಬಾಯ್ ಫ್ರೆಂಡ್ ಜೊತೆ ತಾಯಿ

mom-3

ತಾಯಿಯಾಗಿರಲಿ, ಮಗಳಾಗಿರಲಿ ಪ್ರೀತಿಯ ಪ್ರೇತ ಬೆನ್ನಿಗಂಟಿದಾಗ ಯಾವುದೇ ಸಂಬಂಧ ಉಳಿಯುವುದಿಲ್ಲ. ಲಂಡನ್ ನ 22 ವರ್ಷದ ಚೆಲ್ಸಿಯಾಗೆ ಇದರ ಅನುಭವವಾಗಿದೆ. 37 ವರ್ಷದ ಕೆವಿನ್ ಸ್ಕಾಟ್ ನನ್ನು ಈಕೆ ಪ್ರೀತಿ ಮಾಡ್ತಾ ಇದ್ದಳು. ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಕೆವಿನ್ ಚೆಲ್ಸಿಯಾಗಿಂತ 15 ವರ್ಷ ದೊಡ್ಡವನಿರುವ ಕಾರಣ ತನ್ನ ತಾಯಿ ಜಾಕ್ವೆಲಿನ್ ಒಪ್ಪಿಗೆ ನೀಡ್ತಾಳಾ ಇಲ್ಲವಾ ಎಂಬ ಭಯ ಚೆಲ್ಸಿಯಾಳಿಗಿತ್ತು.

ಕೆವಿನ್ ನೋಡಿದ ತಾಯಿ ಮಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾಳೆ. ತಾಯಿ ಒಪ್ಪಿಗೆ ಸಿಕ್ಕ ನಂತ್ರ ಹೊಸ ಜೀವನದ ಕನಸು ಕಾಣ್ತಾ ಇದ್ದಳು ಚೆಲ್ಸಿಯಾ. ದಿನ ಕಳೆದಂತೆ ತಾಯಿ ಹಾಗೂ ಕೆವಿನ್ ನಡವಳಿಕೆ ಈಕೆಗೆ ವಿಚಿತ್ರ ಎನಿಸುತ್ತಿತ್ತು. ಒಂದು ದಿನ ಕೆವಿನ್ ಫೇಸ್ಬುಕ್ ಗೆ ಮಹಿಳೆಯೊಬ್ಬಳ ಮೆಸ್ಸೇಜ್ ಬಂದಿರುವುದನ್ನು ಚೆಲ್ಸಿಯಾ ನೋಡಿದ್ದಾಳೆ. ಮೆಸ್ಸೇಜ್ ಓಪನ್ ಮಾಡಿ ನೋಡಿದಾಗ ಚೆಲ್ಸಿಯಾಗೆ ತಲೆಸುತ್ತು ಬಂದಂತಾಗಿದೆ.

ಕೆವಿನ್ ಗೆ ಬಂದಿದ್ದು ಬೇರೆ ಯಾರದ್ದೋ ಸಂದೇಶವಾಗಿರಲಿಲ್ಲ. ಚೆಲ್ಸಿಯಾ ತಾಯಿ ಜಾಕ್ವೆಲಿನಳದಾಗಿತ್ತು. ಹಾಸಿಗೆಯಲ್ಲಿ ನೀವು ಅದ್ಭುತ ಎಂದು ಕೆವಿನ್ ಗೆ ಜಾಕ್ವೆಲಿನ್ ಸಂದೇಶ ಕಳುಹಿಸಿದ್ದಳು. ತಾಯಿ ಮೊದಲು ಇದನ್ನು ಒಪ್ಪಿಕೊಳ್ಳಲಿಲ್ಲ. ನಂತ್ರ ಚೆಲ್ಸಿಯಾ ಬಾಯಿ ಬಿಡಿಸಿದ್ದಾಳೆ. ಈ ಬಗ್ಗೆ ಕೇಳಿದಾಗ ಕೆವಿನ್ ಚೆಲ್ಸಿಯಾಗೆ ಮನಸ್ಸಿಗೆ ಬಂದಂತೆ ಹೊಡೆದಿದ್ದಾನೆ. ಇದರಿಂದ ನೊಂದ ಚೆಲ್ಸಿಯಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದ್ರೆ ಸ್ನೇಹಿತರು ಆಕೆಯನ್ನು ರಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...