alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಮಗುವಿನ ತಂದೆ ಪತ್ತೆಗಾಗಿ ಟಿವಿ ಕಾರ್ಯಕ್ರಮದ ಮೊರೆ ಹೋದ ಬಾಲೆ

ಹೆಣ್ಣು ಮಗುವಿಗೆ ತಾಯಿಯಾಗಿರುವ ಉಕ್ರೇನ್ ನ 12 ವರ್ಷದ ಬಾಲಕಿ ಮಗುವಿನ ತಂದೆ ಯಾರು ಅನ್ನೋದನ್ನು ಪತ್ತೆ ಮಾಡಲು ಟಿವಿ ಕಾರ್ಯಕ್ರಮದ ಮೊರೆಹೋಗಿದ್ದಾಳೆ. ಲೈವ್ ಶೋನಲ್ಲಿ ಶಂಕಿತರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿ ಮಗುವಿನ ತಂದೆ ಯಾರು ಅನ್ನೋದನ್ನು ಪತ್ತೆ ಮಾಡಲಾಗುತ್ತದೆ.

11 ವರ್ಷದವಳಿದ್ದಾಗ ಬಾಲಕಿ ಗರ್ಭಿಣಿಯಾಗಿದ್ದಳು. ಮಲ ತಂದೆ ಅಥವಾ ಇಬ್ಬರು ಸಹೋದರರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಅಂತಾ ಬಾಲಕಿ ಆರೋಪ ಮಾಡಿದ್ದಳು. ಆದ್ರೆ ಮಲತಂದೆಯ ಡಿಎನ್ಎ ಮಗುವಿನೊಂದಿಗೆ ಹೊಂದಾಣಿಕೆಯೇ ಆಗಿರಲಿಲ್ಲ.

ಬಾಲಕಿಗೆ ಮಗು ಜನಿಸಿ 5 ವಾರಗಳಾಗಿವೆ. ಪಕ್ಕದ ಮನೆಯಲ್ಲಿರುವ 18ರ ಯುವಕ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಅಂತಾ ಈಗ ಆಕೆ ಹೇಳ್ತಿದ್ದಾಳೆ. ಅಸಲಿಗೆ ಮಗುವಿಗೆ ತಂದೆ ಯಾರು ಅನ್ನೋದೇ ಈಗ ಬಹುದೊಡ್ಡ ಪ್ರಶ್ನೆಯಾಗಿದೆ. ಹಾಗಾಗಿ ಟಿವಿ ಶೋನಲ್ಲಿ ಆಕೆಯ ಮಲತಂದೆ ಮತ್ತು ಇಬ್ಬರು ಸಹೋದರರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...