alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಪ್ರಾಣಬಿಟ್ಟ ದೈತ್ಯ ಮೊಲ

giant-rabbit-simon_650x400_61493257795

ಮೂರು ಅಡಿ ಉದ್ದದ ದೈತ್ಯ ಮೊಲ ವಿಮಾನದಲ್ಲಿ ಕೊನೆಯುಸಿರೆಳೆದಿದೆ. ಲಂಡನ್ ನಿಂದ ಚಿಕಾಗೋಗೆ ಹೊರಟಿದ್ದ ಯುನೈಟೆಡ್ ಏರ್ ಲೈನ್ಸ್ ವಿಮಾನದಲ್ಲಿ ಮೊಲ ಸಾವನ್ನಪ್ಪಿದೆ. 10 ತಿಂಗಳ ಪ್ರಾಯದ ಈ ಮೊಲದ ಹೆಸರು ಸಿಮೊನ್. ವಿಶ್ವದ ಅತಿ ದೊಡ್ಡ ಮೊಲ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗುವುದರಲ್ಲಿತ್ತು. ಆದ್ರೆ ಅಷ್ಟರಲ್ಲಾಗ್ಲೇ ಈ ಅವಘಡ ಸಂಭವಿಸಿದೆ.

ಸೆಲೆಬ್ರಿಟಿಯೊಬ್ರು ಈ ಮೊಲವನ್ನು ಕರೆದುಕೊಂಡು ಬಂದಿದ್ರು. ವಿಮಾನ ಏರುವ ಸಂದರ್ಭದಲ್ಲಿ ಮೊಲ ಆರೋಗ್ಯವಾಗಿಯೇ ಇತ್ತು. ಆದ್ರೆ ವಿಮಾನ ಸಿಬ್ಬಂದಿ ಸ್ವಲ್ಪ ಹೊತ್ತಿನ ಬಳಿಕ ನೋಡಿದಾಗ, ಮೊಲ ಉಸಿರಾಡುತ್ತಿರಲಿಲ್ಲ. ಮಲಗಿದಲ್ಲೇ ಅದರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೊಲದ ಸಾವಿಗೆ ಕಾರಣ ಏನು ಅನ್ನೋದು ಇದುವರೆಗೂ ಪತ್ತೆಯಾಗಿಲ್ಲ.

ಮೊಲದ ಮರಣೋತ್ತರ ಪರೀಕ್ಷೆ ನಡೆಸಲು ಮಾಲೀಕ ನಿರಾಕರಿಸಿದ್ದಾರೆ. ಯುನೈಟೆಡ್ ಏರ್ ಲೈನ್ಸ್ ಮೊಲದ ಮಾಲೀಕರಿಗೆ ಪರಿಹಾರವನ್ನು ಕೂಡ ನೀಡಿದೆ. ವಿಮಾನ ಏರುವ ಮೂರು ಗಂಟೆಗೂ ಮುನ್ನ ಮೊಲವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಆರೋಗ್ಯವಾಗಿಯೇ ಇದ್ದ ಸಿಮೊನ್, ಇದ್ದಕ್ಕಿದ್ದಂತೆ ಸತ್ತು ಹೋಗಿರುವುದು ಮಾಲೀಕರಿಗೆ ಅತೀವ ಬೇಸರ ಉಂಟುಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...