alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಬ್ಬಾವಿನ ಹೊಟ್ಟೆಯಲ್ಲಿತ್ತು ಮಹಿಳೆಯ ದೇಹ…!

ತೋಟಕ್ಕೆ ತೆರಳಿದ್ದ ಮಹಿಳೆಯೊಬ್ಬಳು ಒಂದು ದಿನ ಕಳೆದರೂ ವಾಪಸ್ ಬಾರದ ಕಾರಣ ಆಕೆಯನ್ನು ಹುಡುಕಿ ಸಾಕಾದ ಸಂಬಂಧಿಕರು ಕಡೆಗೆ ತೋಟದ ಬಳಿ ಮಲಗಿದ್ದ ಹೆಬ್ಬಾವೊಂದರ ಹೊಟ್ಟೆ ಸೀಳಿದಾಗ ಮಹಿಳೆಯ ಮೃತದೇಹ ಕಂಡು ಬಂದಿದೆ.

ಇಂಡೋನೇಷ್ಯಾದಲ್ಲಿ ಈ ದಾರುಣ ಘಟನೆ ನಡೆದಿದ್ದು, ಸುಲವೇಸಿ ಕಡಲ ತೀರದಲ್ಲಿರುವ ಮುನಾ ದ್ವೀಪದ ಲವೆಲಾ ಗ್ರಾಮದ ನಿವಾಸಿ 54 ವರ್ಷದ ವಾ ಟಿಬಾ ಹೆಬ್ಬಾವಿಗೆ ಆಹಾರವಾದ ಮಹಿಳೆಯಾಗಿದ್ದಾಳೆ.

ಗುರುವಾರ ಬೆಳಗ್ಗೆ ತನ್ನ ತೋಟಕ್ಕೆ ತೆರಳಿದ್ದ ವಾ ಟಿಬಾ ಒಂದು ದಿನ ಕಳೆದರೂ ಮನೆಗೆ ವಾಪಸ್ ಬಂದಿಲ್ಲ. ಇದರಿಂದ ಆತಂಕಗೊಂಡ ಸಂಬಂಧಿಕರು ಆಕೆಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ತೋಟದ ಸಮೀಪ 23 ಅಡಿ ಉದ್ದದ ಹೆಬ್ಬಾವೊಂದು ಅವರುಗಳ ಕಣ್ಣಿಗೆ ಬಿದ್ದಿದ್ದು, ಅದರ ಹೊಟ್ಟೆ ಉಬ್ಬಿರುವುದು ಅನುಮಾನಕ್ಕೆ ಕಾರಣವಾಗಿದೆ.

ಅದರ ಹೊಟ್ಟೆಯನ್ನು ಕತ್ತರಿಸಿದಾಗ ವಾ ಟಿಬಾಳ ಮೃತದೇಹ ಪತ್ತೆಯಾಗಿದೆ. ಸಣ್ಣಪುಟ್ಟ ಪ್ರಾಣಿಗಳನ್ನು ಹೆಬ್ಬಾವುಗಳು ನುಂಗುವುದು ಸಾಮಾನ್ಯವಾಗಿದ್ದು, ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳು ಈ ಪ್ರಾಂತ್ಯದಲ್ಲಿ ಬಲಿಯಾಗಿದ್ದಾಳೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...