alex Certify
ಕನ್ನಡ ದುನಿಯಾ       Mobile App
       

Kannada Duniya

ದೈತ್ಯ ಹೆಬ್ಬಾವನ್ನು ಕೊಂದು ತಿಂದಿದ್ದಾರೆ ಈ ಗ್ರಾಮಸ್ಥರು

ಇಂಡೋನೇಷ್ಯಾದಲ್ಲಿ ದೈತ್ಯ ಹೆಬ್ಬಾವೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿತ್ತು. ಆ ಹಾವನ್ನು ಹಿಡಿದು ಊರವರೆಲ್ಲ ತಿಂದುಬಿಟ್ಟಿದ್ದಾರೆ.

ಬಟಾಂಗ್ ಗನ್ಸಾಲ್ ಎಂಬಲ್ಲಿರುವ ಆಯಿಲ್ ಪಾಮ್ ತೋಟದಲ್ಲಿ ರಾಬರ್ಟ್ ನಬಾಬನ್ ಎಂಬಾತ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ತೋಟದಲ್ಲಿ ಸುತ್ತು ಹಾಕುತ್ತಿದ್ದಾಗ ಬೃಹತ್ ಗಾತ್ರದ ಹೆಬ್ಬಾವೊಂದನ್ನು ನೋಡಿದ್ದ. ಈ ಹೆಬ್ಬಾವು ಬರೋಬ್ಬರಿ 7.8 ಮೀಟರ್ ಉದ್ದವಿತ್ತು. ಅದನ್ನು ತಿನ್ನುವ ಆಸೆಯಿಂದ  ಹಿಡಿಯಲು ನಬಾಬನ್ ಸಾಕಷ್ಟು ಕಸರತ್ತು ಮಾಡಿದ್ದ. ಆದ್ರೆ ಹಾವು ತಿರುಗಿ ಬಿದ್ದಿತ್ತು. ಅವನ ಕೈಗಳನ್ನೇ ನುಂಗಿ ಹಾಕಲು ಮುಂದಾಗಿತ್ತು.

ಅದನ್ನು ನೋಡಿದ ಇನ್ನೋರ್ವ ಭದ್ರತಾ ಸಿಬ್ಬಂದಿ ಊರವರನ್ನೆಲ್ಲ ಕರೆತಂದು ನಬಾಬನ್ ನನ್ನು ಬಚಾವ್ ಮಾಡಿದ್ದಾನೆ. ಎಲ್ಲರೂ ಒಟ್ಟಾಗಿ ಆ ಹಾವನ್ನು ಕೊಂದಿದ್ದಾರೆ. ಮಾಂಸವನ್ನು ಚೆನ್ನಾಗಿ ಫ್ರೈ ಮಾಡಿಕೊಂಡು ತಿಂದಿದ್ದಾರೆ. ಕಳೆದ ಮಾರ್ಚ್ ನಲ್ಲಿ ಹೆಬ್ಬಾವು ಮನುಷ್ಯನೊಬ್ಬನನ್ನು ಇಡಿಯಾಗಿ ನುಂಗಿತ್ತು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...