alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದಲ್ಲಿ ಸಿಕ್ಕಿದೆ ದೈತ್ಯಾಕಾರದ ಸೊಳ್ಳೆ

ಚೀನಾದ ಸಿಚುವಾನ್ ಪ್ರದೇಶದಲ್ಲಿ ದೈತ್ಯ ಸೊಳ್ಳೆಯೊಂದು ಪತ್ತೆಯಾಗಿದೆ. ಈ ಸೊಳ್ಳೆಯ ರೆಕ್ಕೆಗಳು 11.15 ಸೆಂಮೀ ಉದ್ದವಾಗಿವೆ. ಇದು ವಿಶ್ವದ ಅತಿ ದೊಡ್ಡ ಸೊಳ್ಳೆಯಾದ ಹೋಲೋರೊಸಿಯಾ ಮಿಕಾಡೋ ಜಾತಿಗೆ ಸೇರಿದ್ದು ಅಂತಾ ಕೀಟ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಚೆಂಗ್ಡು ಬಳಿಯ ಮೌಂಟ್ ಕ್ವಿಂಗ್ ಚೆಂಗ್ ಎಂಬಲ್ಲಿ ಕಳೆದ ವರ್ಷ ಮಿಕಾಡೋ ಸೊಳ್ಳೆಗಳು ಪತ್ತೆಯಾಗಿದ್ದವು. ಮಿಕಾಡೋ ಸೊಳ್ಳೆಗಳ ರೆಕ್ಕೆ ಸಾಮಾನ್ಯವಾಗಿ 8 ಸೆಂಮೀ ಉದ್ದವಾಗಿರುತ್ತದೆ. ಆದ್ರೆ ಈಗ ಕಾಣಿಸಿಕೊಂಡಿರೋ ಸೊಳ್ಳೆ ಅದಕ್ಕಿಂತ್ಲೂ ದೊಡ್ಡದಾಗಿದೆ.

ವಿಶೇಷ ಅಂದ್ರೆ ಈ ಸೊಳ್ಳೆಗಳು ಮನುಷ್ಯರ ರಕ್ತ ಹೀರುವುದಿಲ್ಲ. ಬದಲಾಗಿ ಮಕರಂದ ಹೀರುತ್ತವೆ. ಇವುಗಳ ಆಯಸ್ಸು ಕೆಲವೇ ದಿನಗಳು ಮಾತ್ರ. ಜಗತ್ತಿನಲ್ಲಿ 10 ಸಾವಿರ ಬಗೆಯ ಸೊಳ್ಳೆಗಳಿವೆ. ಅವುಗಳಲ್ಲಿ 100 ಜಾತಿಯ ಸೊಳ್ಳೆಗಳು ಮನುಷ್ಯನ ರಕ್ತ ಹೀರುತ್ತವೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...