alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೆಜಿಲ್ ಅಧ್ಯಕ್ಷರಿಗೆ ದೆವ್ವದ ಕಾಟ !

brazil-temer-report

ಬ್ರೆಜಿಲ್ ಅಧ್ಯಕ್ಷ ಮೈಕೆಲ್ ಟೇಮರ್ ಗೆ ಪ್ರೇತಾತ್ಮಗಳ ಕಾಟ ಶುರುವಾಗಿದೆಯಂತೆ. ವಿಚಿತ್ರ ಕಂಪನಗಳ ಅನುಭವವಾಗ್ತಿದೆಯಂತೆ. ಅಷ್ಟೇ ಅಲ್ಲ ಶನಿವಾರ ಬ್ರಾಸಿಲಿಯಾದಲ್ಲಿರೋ ಅಧಿಕೃತ ನಿವಾಸದಿಂದ ಪ್ರೇತಾತ್ಮಗಳೇ ತಮ್ಮನ್ನು ಕರೆದೊಯ್ದಿವೆ ಎನ್ನುತ್ತಿದ್ದಾರೆ ಅಧ್ಯಕ್ಷರು.

ಅಲ್ವೊರಾಡಾ ಪ್ಯಾಲೇಸ್ ನಿಂದ ಮೈಕೆಲ್ ತಮ್ಮ ಪತ್ನಿ ಮತ್ತು ಮಗನೊಂದಿಗೆ ಚಿಕ್ಕದಾಗಿರುವ ಉಪರಾಷ್ಟ್ರಪತಿಗಳ ನಿವಾಸಕ್ಕೆ ಸ್ಥಳಾಂತರಗೊಂಡಿದ್ಯಾಕೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇತ್ತು. ಅಲ್ವೊರಾಡಾ ಪ್ಯಾಲೇಸ್ ನಲ್ಲಿ ದೆವ್ವಗಳ ಹಾವಳಿ ಶುರುವಾಗಿದ್ದರಿಂದ ಮೈಕೆಲ್ ಅಧಿಕೃತ ನಿವಾಸಕ್ಕೆ ಶಿಫ್ಟ್ ಆಗಿದ್ದಾರಂತೆ.

ಅಲ್ವೊರಾಡಾ ಪ್ಯಾಲೇಸ್ ಎಲ್ಲರಿಗೂ ಇಷ್ಟವಾಗುವಂತಹ ಕನಸಿನ ಮನೆ. ದೊಡ್ಡದಾದ ಈಜುಕೊಳ, ಫುಟ್ಬಾಲ್ ಮೈದಾನ, ಮೆಡಿಕಲ್ ಸೆಂಟರ್, ಬೃಹತ್ ಲಾನ್ ಎಲ್ಲವೂ ಅಲ್ಲಿದೆ. ಆದ್ರೆ 76ರ ಹರೆಯದ ಅಧ್ಯಕ್ಷ ಮೈಕೆಲ್, ಹಾಗೂ 36 ವರ್ಷದ ಅವರ ಪತ್ನಿ ಮರ್ಸೆಲಾಗೆ ಆ ಮನೆಯಲ್ಲಿ ವಿಚಿತ್ರ ಅನುಭವವಾಗ್ತಿದೆಯಂತೆ. ಆ ಮನೆ ಪ್ರವೇಶಿಸಿದಾಗಿನಿಂದ ಒಂದು ದಿನವೂ ರಾತ್ರಿ ಸರಿಯಾಗಿ ನಿದ್ದೆ ಬಂದಿಲ್ಲವಂತೆ.

ಪತ್ನಿ ಮರ್ಸೆಲಾಗೂ ಇದೇ ಅನುಭವವಾಗಿದೆ. ಆದ್ರೆ ಅವರ 7 ವರ್ಷದ ಮಗ ಮಾತ್ರ ಅತ್ತಿಂದಿತ್ತ ಓಡಾಡುತ್ತ ಖುಷಿಯಾಗಿದ್ದ. ಮನೆಯಲ್ಲಿರುವ ದುಷ್ಟಶಕ್ತಿಯನ್ನು ಓಡಿಸಲು ಮರ್ಸೆಲಾ ಮಾಂತ್ರಿಕರನ್ನು ಕೂಡ ಕರೆಸಿದ್ದರು. ಆದ್ರೂ ಪ್ರೇತಾತ್ಮಗಳ ಕಾಟ ಕಡಿಮೆಯಾಗದೇ ಇದ್ದಿದ್ರಿಂದ ಅಧ್ಯಕ್ಷರು ಬಂಗಲೆಯನ್ನೇ ತೊರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...